May 16, 2020, 12:40 PM IST
ಬೆಂಗಳೂರು(ಮೇ 16): ಮಾಜಿ ಡಾನ್ ಮುತ್ತಪ್ಪ ರೈ ನಿಧನರಾಗಿದ್ದು, ಅವರು ಕರ್ಮ ಭೂಮಿ ಬಿಡಿದಿಯಲ್ಲಿ ಅಂತ್ಯ ಕ್ರಿಯೆ ನೆರವೇರಿಸಲಾಯಿತು. 2ನೇ ಪತ್ನಿ ಅನುರಾಧಾ ಅವರನ್ನು ಕುಟುಂಬಸ್ಥರು ಅಂತಿಸ ನಮನ ಸಲ್ಲಿಸಲು ಅನುವು ಮಾಡಿ ಕೊಟ್ಟಿರಲಿಲ್ಲ.
ಅವರು ಹೊರತು ಪಡಿಸಿ, ಉಳಿದ ಸಂಬಂಧಿಕರ ಸಮ್ಮುಖದಲ್ಲಿ ನಡೆದ ಅಂತ್ಯ ಕ್ರಿಯೆಯ್ಲಿಲ ಚಿತೆಗೆ ಬೆಂಕಿ ಇಟ್ಟ ಕೂಡಲೇ, ಗುಂಡು ಹಾರಿಸಲಾಗಿತ್ತು. ಮುತ್ತಪ್ಪ ರೈ ಅಂತ್ಯಕ್ರಿಯೆಯ ವೇಳೆ ಗಾಳಿಯಲ್ಲಿ ಗುಂಡು ಹಾರಿಸಲಾಗಿದೆ.
ಬಾಲ್ಯದ ದಿನಗಳಲ್ಲಿ ಹೀಗಿದ್ರು ಮುತ್ತಪ್ಪ ರೈ, ಚೈಲ್ಡ್‌ಹುಡ್ ಫ್ರೆಂಡ್ ಏನ್ ಹೇಳ್ತಾರೆ ಕೇಳಿ
ಮುತ್ತಪ್ಪ ರೈ ಸೆಕ್ಯುರಿಟಿ ಗಾರ್ಡ್ಸ್ ಅಂತ್ಯಕ್ರಿಯೆಯ ಸಂದರ್ಭ ಗುಂಡು ಹಾರಿಸಿದ್ದಾರೆ. ಇದನ್ನು ತಡೆಯುವಲ್ಲಿ ಆಯೋಜಕರು ವಿಫಲರಾಗಿದ್ದು, ಆಯೋಜಕ ಪ್ರಕಾಶ್ ಸೇರಿ ಆರು ಜನರನ್ನು ಬಂಧಿಸಲಾಗಿದೆ. ಪ್ರಕಾಶ್ ಸೇರಿ 7 ಜನರನ್ನು ಬಿಡದಿ ಪೊಲೀಸರು ಬಂಧಿಸಿದ್ದು, ಅಲ್ಲಿ ಬಳಸಿದ ಶಸ್ತ್ರಾಸ್ತ್ರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.