Dec 6, 2020, 5:05 PM IST
ರಾಯಚೂರು (ಡಿ. 06): 5ಎ ಕಾಲುವೆ ಅನುಷ್ಠಾನಕ್ಕೆ ಆಗ್ರಹಿಸಿ ಕಳೆದ 16 ದಿನಗಳಿಂದ ಮಸ್ಕಿ ತಾಲೂಕಿನ ಪಾಮನಕೆಲ್ಲೂರು ಗ್ರಾಮದ ಬಳಿ ರೈತರು ಹೋರಾಟ ನಡೆಸುತ್ತಿದ್ದಾರೆ.
ಸಂಪುಟ ವಿಸ್ತರಣೆ : ಕೈ ತೊಳೆದುಕೊಂಡ ಉಸ್ತುವಾರಿ, ಬಿಎಸ್ವೈಗೆ ಜವಾಬ್ದಾರಿ!
ಗ್ರಾಮ ಪಂಚಾಯತ್ ಚುನಾವಣೆ ಬಂದ ಹಿನ್ನೆಲೆ ಹೋರಾಟ ತೀವ್ರಗೊಂಡಿದೆ. ಗ್ರಾಮ ಪಂಚಾಯತ್ ಚುನಾವಣೆ ಬಹಿಷ್ಕಾರಕ್ಕೆ 30 ಗ್ರಾಮಗಳ ಗ್ರಾಮಸ್ಥರು ಮುಂದಾಗಿದ್ಧಾರೆ. ಅಂಕುಶದೊಡ್ಡಿ, ಪಾವನಕಲ್ಲೂರು, ಅಮೀನಗಡ, ವಟಗಲ್ ಗ್ರಾ. ಪ. ವ್ಯಾಪ್ತಿಯಲ್ಲಿ ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ ಮಾಡಲಾಗಿದೆ. ಎನ್ಆರ್ಬಿಸಿ 5ಎ ಕಾಲುವೆಯಾಗುವವರೆಗೂ ಹೋರಾಟ ಮುಂದುವರಿಸಲು ರೈತರ ಹೋರಾಟ ಸಮಿತಿ ನಿರ್ಧರಿಸಿದೆ.