Nov 26, 2022, 5:02 PM IST
ತುಮಕೂರು; ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಹೋಗುತ್ತಿದ್ದ ಪೊಲೀಸ್ ಕಮಿಷನರ್ ಶಶಿಕುಮಾರ್, ದಾರಿ ಮಧ್ಯೆ ತುಮಕೂರು ನಗರದ ಹನುಮಂತಪುರದಲ್ಲಿರುವ ಕೊಲ್ಲಾಪುರದಮ್ಮ ದೇವಸ್ಥಾನಕ್ಕೆ ದಿಢೀರ್ ಭೇಟಿ ಕೊಟ್ಟಿದ್ದಾರೆ. ದೇವಸ್ಥಾನದ ದೀಪಾಲಂಕಾರ, ಲಕ್ಷ ದೀಪೋತ್ಸವ ಕಂಡು ಮನಸೋತಿದ್ದಾರೆ. ಈ ವೇಳೆ ಪುನೀತ್ ರಾಜ್ ಕುಮಾರ್ ಅವರ ಗೊಂಬೆ ಹೇಳುತೈತೆ ಹಾಗೂ ಟಗರು ಬಂತು ಟಗರು ಹಾಡು ಹಾಡಿ ರಂಜಿಸಿದ್ದಾರೆ ಕಮಿಷನರ್. ಅವರ ಹಾಡಿಗೆ ಶಿಳ್ಳೆ-ಕೇಕೆ ಹಾಕಿ ಜನರು ಸಂಭ್ರಮಿಸಿದ್ದು, ಜೊತೆಗೆ ಅವರು ಅನ್ನದಾನದಲ್ಲಿ ಪಾಲ್ಗೊಂಡು ಸರತಿಯಲ್ಲಿ ಕುಂತು ಪ್ರಸಾದ ಸ್ವೀಕರಿಸಿ ಸರಳತೆ ಮೆರೆದಿದ್ದಾರೆ.