Jul 10, 2021, 12:48 PM IST
ಮಂಡ್ಯ(ಜು.10): ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಹಾಗೂ ರಾಕ್‌ಲೈನ್ ವೆಂಕಟೇಶ್ ಮೇಲೆ ಜೆಡಿಎಸ್ ನಾಯಕರು ಮುಗಿಬಿದ್ದಿದ್ದಾರೆ. ಮಂಡ್ಯ ಜಿಲ್ಲೆಯ ಬಗ್ಗೆ ಮಾತನಾಡುವಾಗ ಬಾಲಿಗೆ ಬಿಗಿ ಬಿಗಿ ಇರಲಿ ಅಂತ ರಾಕ್‌ಲೈನ್ ವೆಂಕಟೇಶ್ ವಿರುದ್ಧ ಮಳವಳ್ಳಿ ಶಾಸಕ ಅನ್ನದಾನಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಂಡ್ಯ ಜಿಲ್ಲೆಗೆ ಸಂಬಂಧ ಇಲ್ಲದವರು ಮಾತನಾಡಬಾರದು, ಮಂಡ್ಯ ಜಿಲ್ಲೆಯ ಬಗ್ಗೆ ನಿಮಗೇನು ಗೊತ್ತಿದೆ ಅಂತ ಅನ್ನದಾನಿ ಕಿಡಿ ಕಾರಿದ್ದಾರೆ.