ಎಣ್ಣೆ ಕುಡಿದು ಡ್ಯೂಟಿ, ಪ್ರಶ್ನಿಸಿದ ಯುವಕನಿಗೆ ಒದೆ..!

Dec 23, 2020, 4:00 PM IST

ತುಮಕೂರು (ಡಿ.23): ಎಣ್ಣೆ ಕುಡಿದು ಡ್ಯೂಟಿ, ಪ್ರಶ್ನೆ ಮಾಡಿದ ಯುವಕನಿಗೆ ಪೊಲೀಸರು ಥಳಿಸಿದ ಘಟನೆ ಜಿಲ್ಲೆಯ  ಕುಣಿಗಲ್‌ನಲ್ಲಿ ನಡೆದಿದೆ. ಕರ್ತವ್ಯ ನಿರ್ವಹಿಸುವ ವೇಳೆ ಮದ್ಯ ಪೊಲೀಸರು‌ ಸೇವಿಸಿದ್ದರು. ಮದ್ಯ ಸೇವನೆ ಮಾಡಿ ಪೊಲೀಸ್‌ ಸಿಬ್ಬಂದಿ 112 ಗಸ್ತು ವಾಹನ ಓಡಿಸುತ್ತಿದ್ದರು.

ಕೊರೋನಾ ಹೊಸ ತಳಿ: ಕ್ವಾರಂಟೈನ್‌ 14 ದಿನ ಅಲ್ಲ, 28 ದಿನ?

ಮದ್ಯ ಸೇವಿಸುತ್ತಿದ್ದಾರಾ? ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಯುವ ಅಧ್ಯಕ್ಷ ರಘು ಜಾಣಗೆರೆ ಎಂಬುವರು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿ ಪ್ರಶ್ನಿಸಿದ್ದಾನೆ. ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಿರುವುದನ್ನು ನೋಡಿ ಪೊಲೀಸರು ಓಡಿ ಹೋಗಿದ್ದರು. ಆದರೆ, ರಘು ಜಾಣಗೆರೆಯನ್ನು ಠಾಣೆಗೆ ಕರೆಸಿ ಮೊಬೈಲ್ ಕಸಿದು ಪೊಲೀಸರು  ಥಳಿಸಿದ್ದಾರೆ.