Jul 1, 2024, 8:58 AM IST
ರೇಣುಕಾಸ್ವಾಮಿ (Renukaswamy) ಕಳಿಸಿದ ಸುಮಾರು 200 ಮೆಸೇಜ್‌ಗೆ ಆತ ಅನುಭವಿಸಿದ್ದು 50 ನಿಮಿಷಕ್ಕೂ ಮೀರಿದ ಯಮಶಿಕ್ಷೆ. 500 ಗಂಟೆಗಳಲ್ಲಿ ನೂರಾರು ಸಾಕ್ಷಿಗಳು. ನೂರಾರು ಸುಳಿವುಗಳು. ದರ್ಶನ್(Darshan) ಅನ್ನೋ ಸಿನಿಮಾ ನಟ, ಅಸಲಿ ಲೈಫ್‌ನಲ್ಲಿ ವಿಲನ್ ಆಗಿ ಜೈಲು ಸೇರಿದ್ದಾನೆ. ಆತನಿಗೋಸ್ಕರ, ಅಭಿಮಾನಿಗಳು ಈ ಕ್ಷಣಕ್ಕೂ ಪ್ರಾಣ ಪಣಕ್ಕಿಟ್ಟು ಕಾಯ್ತಾ ಇದಾರೆ. ರೇಣುಕಾಸ್ವಾಮಿ ಅನ್ನೋನ ಕೊಲೆ ಮಾಡಿದ ಆರೋಪಕ್ಕೆ ಬರೀ ದರ್ಶನ್ ಮಾತ್ರವೇ ಅಲ್ಲ, ಆತನ ಬೆನ್ನಿಗೆ ನಿಂತಿದ್ದೋರೆಲ್ಲಾ, ಕಂಬಿ ಹಿಂದೆ ನಿಲ್ಲೋ ಹಾಗಾಗಿದೆ. ರೇಣುಕಾಸ್ವಾಮಿಯ ಹತ್ಯೆಯ (Renukaswamy murder case) ಹಿಂದೆ ಯಾರು ಪ್ರಮುಖ ಕಾರಣರಾಗಿದ್ರೋ, ಯಾರಿಗೆ ಕಳಿಸಬಾರದ ಮೆಸೇಜ್(Obscene messages) ಕಳಿಸಿ, ರೇಣುಕಾಸ್ವಾಮಿ ತಪ್ಪು ಮಾಡಿದ್ನೋ, ಯಾರ ಸಲುವಾಗಿ ದರ್ಶನ್ ಈ ಕೊಲೆ ಕೇಸ್‌ನಲ್ಲಿ ತಗಲಾಕ್ಕೊಳ್ಬೇಕಾಯ್ತೋ, ಆ ಪವಿತ್ರಾ ಗೌಡ ಕೂಡ ಈಗ ಕಂಬಿಗಳ ಹಿಂದೆ ನಿಂತಾಗಿದೆ. ಜೊತೆಗೆ, ರೇಣುಕಾಸ್ವಾಮಿಗೆ ನರಕ ಯಾತನೆ ಕೊಟ್ಟು ಕೊನೆಗೆ ಕೊಲೆ ಮಾಡಿ, ಆತನ ಡೆಡ್ ಬಾಡಿನಾ ರಾಜಕಾಲುವೆಗೆ ಬಿಸಾಕಿ, ಸಾಕ್ಷಿ ನಾಶ ಮಾಡೋ ಕೆಲಸ ಮಾಡಿತ್ತು ಡಿ-ಗ್ಯಾಂಗ್. ಇದರಲ್ಲಿ ಅತಿ ಮುಖ್ಯ ಆರೋಪಿಯಾಗಿದ್ದು ದರ್ಶನ್. ಅಮಾನುಷವಾಗಿ ಕ್ರೌರ್ಯದ ಪರಾಕಾಷ್ಠೆ ಮೆರೆದು, ರೇಣುಕಾಸ್ವಾಮಿಯ ಕಗ್ಗೊಲೆ ಮಾಡಿದ ಆರೋಪದ ಮೇಲೆ, ದರ್ಶನ್ ಕಂಬಿ ಹಿಂದೆ ನಿಲ್ಲಬೇಕಾಗಿದೆ.
ಇದನ್ನೂ ವೀಕ್ಷಿಸಿ: ಪ್ರವಾಸಿ ತಾಣಗಳ ಅಭಿವೃದ್ಧಿಗೆ ಪಣ ತೊಟ್ಟ ರಾಜ್ಯ! 7 ರಾಜ್ಯದ ಪ್ರವಾಸೋದ್ಯಮ ತಜ್ಞರ ಜೊತೆ ಚರ್ಚೆ,ಸಂವಾದ!