Bidar: ಪಾಳುಬಿದ್ದ ಮನೆಗಳಲ್ಲೇ ಬಡವರ ವಾಸ: ಮೂಲಭೂತ ಸೌಕರ್ಯ ಕೊಡಲು ಜಿಲ್ಲಾಡಳಿತ ಹಿಂದೇಟು

Dec 13, 2021, 11:39 AM IST

ಬೀದರ್‌(ಡಿ.13): ಬೀದರ್‌ ನಗರದಿಂದ ಕೂಗಳತೆ ದೂರದಲ್ಲಿ ಇರುವ ಗೊರನಹಳ್ಳಿ ಗ್ರಾಮದ ಸಮೀಪ ರಾಜ್ಯ ಸರ್ಕಾರ ನೂರಾರು ಮನೆಗಳನ್ನ ಬಡವರಿಗಾಗಿ ಕಟ್ಟಿಸಿಕೊಟ್ಟಿದೆ. ಆದರೆ, ಇಲ್ಲಿ ಮನೆಗಳು ನಿರ್ಮಾಣವಾಗಿ 10 ವರ್ಷಗಳೇ ಕಳೆದರೂ ಇಲ್ಲಿನ ಮನೆಗಳನ್ನ ಜಿಲ್ಲಾಡಳಿತ ಫಲಾನುಭವಿಗಳಿಗೆ ಹಸ್ತಾಂತರ ಮಾಡಿಲ್ಲ. ಮನೆಗಳನ್ನ ಹಸ್ತಾಂತರ ಮಾಡಲು 75 ಫಲಾನುಭವಿಗಳನ್ನ ಆಯ್ಕೆ ಮಾಡಲಾಗಿದೆ. ಆದರೆ, ಇಲ್ಲಿ ಕುಟುಂಬಗಳು ಅಕ್ರಮವಾಗಿ ವಾಸವಾಗಿ ಮಾಡ್ತಾ ಇವೆ ಎಂಬ ನೆಪಹೇಳಿ ಅವರಿಗೆ ಮೂಲಭೂತ ಸೌಕರ್ಯ ನೀಡಲು ಜಿಲ್ಲಾಡಳಿತ ಹಿಂದೇಟು ಹಾಕುತ್ತಿದೆ. ಪಾಳುಬಿದ್ದ ಮನೆಗಳಲ್ಲೇ ಬಡವರು ಅಕ್ರಮವಾಗಿ ವಾಸ ಮಾಡಲು ಆರಂಭಿಸಿ 7-8  ವರ್ಷಗಳೇ ಉರುಳಿವೆ. 

Belagavi Assembly Session: ಕಾಂಗ್ರೆಸ್‌ ಶಾಸಕಿ ನಿಂಬಾಳ್ಕರ್‌ ನೇತೃತ್ವದಲ್ಲಿ ಸಂಘರ್ಷ ಪಾದಯಾತ್ರೆ