ಬಾದಾಮಿ ಬನಶಂಕರಿ ಜಾತ್ರೆಯಲ್ಲಿ 'ಹೌದ್ದ ಹುಲಿಯಾ' ಪೀರಪ್ಪ ಪ್ರತ್ಯಕ್ಷ!

Jan 27, 2020, 12:24 PM IST

ಬಾಗಲಕೋಟೆ(ಜ.27): ಮಾಜಿ ಸಿಎಂ ಸಿದ್ದರಾಮಯ್ಯ ಚುನಾವಣಾ ಪ್ರಚಾರ ಭಾಷಣ ವೇಳೆ ಹೌದ್ದ ಹುಲಿಯಾ ಡೈಲಾಗ್‌ ಫುಲ್‌ ಫೇಮಸ್‌ ಆಗಿತ್ತು. ಇದೇ ಡೈಲಾಗ್‌ ಟೈಟಲ್‌ನಟಿ ನಾಟಕವೊಂದು ಜಿಲ್ಲೆಯ ಬಾದಾಮಿ ಬನಶಂಕರಿ ಜಾತ್ರೆಯಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಹುನಗುಂದ ತಾಲೂಕಿನ ಕಮತಗಿಯ ಹುಚ್ಚೇಶ್ವರ ನಾಟ್ಯ ಸಂಘ ಈ ನಾಟಕವನ್ನ ಪ್ರದರ್ಶನ ಮಾಡುತ್ತಿದೆ. 

ಬಾದಾಮಿ ಬನಶಂಕರಿ ಜಾತ್ರೆಯಲ್ಲೂ ಸದ್ದು ಮಾಡ್ತಿದೆ 'ಹೌದ್ದ ಹುಲಿಯಾ' ನಾಟಕ! 

ಹೌದ್ದ ಹುಲಿಯಾ ಡೈಲಾಗ್‌ ಹೇಳಿ ಪ್ರಸಿದ್ಧನಾಗಿದ್ದ ಪೀರಪ್ಪ ಭಾನುವಾರ ರಾತ್ರಿ ಬನಶಂಕರಿ ಜಾತ್ರೆಯಲ್ಲಿ ಪ್ರದರ್ಶನವಾಗುತ್ತಿದ್ದ ನಾಟಕ ನೋಡಲು ಆಗಮಿಸಿದ್ದ. ಈ ವೇಳೆ ನಾಟಕ ಕಂಪನಿಯ ಮಾಲೀಕರು, ಕಲಾವಿದರು ಪೀರಪ್ಪ ಅವರನ್ನ ಸನ್ಮಾನಿಸಿದ್ದಾರೆ. ಈ ನಾಟಕ ನೋಡಲು ಜನರು ಮುಗಿ ಬಿದ್ದಿದ್ದಾರೆ