Feb 10, 2022, 12:25 PM IST
ಬೆಂಗಳೂರು (ಫೆ. 10): ಉಡುಪಿ ಪದವಿ ಪೂರ್ವ ಕಾಲೇಜಿನಲ್ಲಿ ಹೊತ್ತಿಕೊಂಡ ಹಿಜಾಬ್-ಕೇಸರಿ ಕಿಡಿ ಇದೀಗ ಉತ್ತರ ದಕ್ಷಿಣವೆನ್ನದೆ ರಾಜ್ಯವ್ಯಾಪಿ ವ್ಯಾಪಿಸಿಕೊಂಡಿದೆ. ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಪ್ರತ್ಯೇಕ ಐದು ಅರ್ಜಿಗಳನ್ನು ವಿಸ್ತೃತ ಪೀಠ ಗುರುವಾರ ಮಧ್ಯಾಹ್ನ 2.30ಕ್ಕೆ ವಿಚಾರಣೆ ನಡೆಸಲಿದೆ. ಹಿಜಾಬ್ ವಿವಾದ ಕೋರ್ಟ್ ಮೆಟ್ಟಿಲೇರಿರುವ ಕುರಿತು ಮಾತನಾಡಿರುವ ವಿದ್ಯಾರ್ಥಿನಿ ಅರ್ಜಿದಾರೆ ಶಿಫಾ " ಕಾಲೇಜು ಪ್ರಾಂಶುಪಾಲರಿಗೆ ನಾವು ಸಾಧ್ಯವಾದಷ್ಟು ಮನವಿ ಮಾಡಿದ್ದೇವು. ನಮ್ಮ ಪೋಷಕರೂ ಮಾತನಡಿದ್ದರು ಅದರೆ, ಪೋಷಕರ ಮಾತಿಗೆ ಬೆಲೆ ಕೊಟ್ಟಿಲ್ಲ" ಎಂದು ಹೇಳಿದ್ದಾರೆ. ಅಲ್ಲದೇ "ಉಡುಪಿ ಶಾಸಕರು ಹಾಗೂ ಮಂತ್ರಿಗಳ ಬಳಿಯೂ ಮಾತನಡಿದ್ದೇವೆ, ಯಾರು ಕೂಡ ಪಾಸಿಟಿವ್ ರಿಸಲ್ಟ್ಸ್ ಕೊಡಲಿಲ್ಲ. ಹೀಗಾಗಿ ನಾವು ನ್ಯಾಯಾಲಯದ ಮೊರೆ ಹೋದೆವು. ನ್ಯಾಯಾಲಯದ ಮೇಲೆ ನಮಗೆ ಭರವಸೆ ಇದೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ: Hijab Row ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದ ವಿದ್ಯಾರ್ಥಿನಿಗೆ 1 ಲಕ್ಷ ರೂ. ಕೊಟ್ಟ ಜೆಡಿಎಸ್ ನಾಯಕ
ತೀವ್ರ ವಿವಾದಕ್ಕೆ ಕಾರಣವಾಗಿರುವ ಹಿಜಾಬ್ ವಿಚಾರದಲ್ಲಿ ವೈಯಕ್ತಿಕ ಕಾನೂನು, ಮೂಲಭೂತ ಹಕ್ಕು ಸೇರಿದಂತೆ ಕೆಲ ಸಾಂವಿಧಾನಿಕ ಪ್ರಶ್ನೆಗಳು ಅಡಗಿರುವ ಹಿನ್ನೆಲೆಯಲ್ಲಿ ವಿಸ್ತೃತ ಪೀಠವೇ ವಿಚಾರಣೆ ನಡೆಸಬೇಕು ಎಂದು ಬುಧವಾರ ಏಕ ಸದಸ್ಯ ಪೀಠ ಮುಖ್ಯ ನ್ಯಾಯಮೂರ್ತಿ ಅವರಿಗೆ ಶಿಫಾರಸು ಮಾಡಿದೆ. ಈ ಬೆನ್ನಲ್ಲೆ ಈ ಸಂಬಂಧಿ ಅರ್ಜಿಗಳ ವಿಚಾರಣೆಗೆ ಹೈಕೋರ್ಟ್ ತ್ರಿಸದಸ್ಯ ನ್ಯಾಯಪೀಠವೊಂದನ್ನು ರಚಿಸಿದೆ. ವಿಸ್ತೃತ ಪೀಠ ಗುರುವಾರ ಮಧ್ಯಾಹ್ ವಿಚಾರಣೆ ನಡೆಸಲಿದೆ.