Jul 6, 2023, 12:45 PM IST
ಬೆಳಗಾವಿ: ಜಿಲ್ಲೆಯಲ್ಲಿ ಹರಿಯಾಣ ಸ್ವಾಮೀಜಿ (Haryana Swamiji ) ಶಪಥ ಮಾಡಿದ್ದು, ಆಡಳಿತ ಮಂಡಳಿ ಬದಲಾಗದಿದ್ದರೆ ಮಳೆ ಬರಲ್ಲ, ನದಿ ತುಂಬಲ್ಲ ಎಂದು ಬೆಳಗಾವಿಯಲ್ಲಿ (Belagavi) ಹೇಳಿದ್ದಾರೆ. ಈ ಮೂಲಕ ಹನುಮಾನ್ (Hanuman) ದೇವಸ್ಥಾನದ ಆಡಳಿತ ಮಂಡಳಿ ಬದಲಾವಣೆಗೆ ಸ್ವಾಮೀಜಿ ಪಟ್ಟು ಹಿಡಿದಿದ್ದಾರೆ. ಮಲಪ್ರಭಾ ನದಿ ದಡದಲ್ಲಿ ಸ್ವಾಮೀಜಿ ತಪಸ್ಸಿಗೆ ಕೂತಿದ್ದಾರೆ. ಹನುಮ ಆಡಳಿತ ಮಂಡಳಿಯಿಂದ ದೇವರಿಗೆ ಅಪಮಾನ ಆಗಿದೆ ಎಂದು ಅವರು ಆರೋಪ ಮಾಡಲಾಗಿದೆ. ಅಲ್ಲದೇ ಹನುಮನಿಗೆ ಕೆಮಿಕಲ್ ಮಿಶ್ರಿತ ವಿಭೂತಿ ಹಚ್ಚಲಾಗುತ್ತಿದೆ ಎಂದು ಹೇಳಿದ್ದಾರೆ. ಸ್ವಾಮೀಜಿ ಮತ್ತು ದೇವಸ್ಥಾನ ಆಡಳಿತ ಮಂಡಳಿ ನಡುವೆ ಬಿರುಕು ಉಂಟಾಗಿದೆ. ಆಡಳಿತ ಮಂಡಳಿ ಬದಲಾಗುವವರೆಗೆ ತಪಸ್ಸನ್ನು ಕೈಬಿಡುವುದಿಲ್ಲ ಎಂದು ಸ್ವಾಮೀಜಿ ಹೇಳಿದ್ದಾರೆ.
ಇದನ್ನೂ ವೀಕ್ಷಿಸಿ: ಬಸ್ ಚಾಲಕ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಟ್ವಿಸ್ಟ್: ವರ್ಗಾವಣೆಗೆ ಬೇಸತ್ರಾ ಜಗದೀಶ್..?