Jul 29, 2022, 7:38 PM IST
ರಾಮನಗರ (ಜು. 29): ಮಂಗಳೂರು ಜಿಲ್ಲೆಯಲ್ಲಿ ಸರಣಿ ಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ರಾಮನಗರದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವತ್ಥ್ ನಾರಾಯಣ್ ಪ್ರತಿಕ್ರಿಯಿಸಿದ್ದ "ಕೊಲೆಗಡುಕರ ಎನ್‌ಕೌಂಟರ್ ಮಾಡುವುದಕ್ಕು ನಾವು ಸಿದ್ದರಿದ್ದವೇ ಎಂದು ಸಿಎಂ ಅವರು ಈಗಾಗಲೇ ತಿಳಿಸಿದ್ದಾರೆ" ಎಂದು ಹೇಳಿದರು. "ಜನರ ತಾಳ್ಮೆಯನ್ನ ಕೆಲವು ಪ್ರಚೋದಕರು ಪರೀಕ್ಷೆ ಮಾಡುತ್ತಿದ್ದಾರೆ, ಸಿಎಂ ಅವರು ಈಗಾಗಲೇ ಸ್ವಷ್ಟ ಸಂದೇಶ ಕೊಟ್ಟಿದ್ದಾರೆ, ಕೊಲೆಗಡುಕರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮವಾಗುತ್ತದೆ, ಮುಂದಿನ ದಿನಗಳಲ್ಲಿ ನಡುಕ ಹುಟ್ಟಿಸುವ, ಎನ್ ಕೌಂಟರ್ ಅಗುವ ಕಾಲ ಬಂದಿದೆ. ತೀವ್ರ ಕ್ರಮ ವಹಿಸಲಾಗುತ್ತದೆ ಪ್ರವೀಣ್ ಹತ್ಯೆ ತರಾ ಬೇರೆ ಎಲ್ಲೂ ಆಗಬಾರದು" ಎಂದರು.
ಬಿಜೆಪಿ ಪದಾಧಿಕಾರಿಗಳ ರಾಜೀನಾಮೆ ವಿಚಾರ ಪ್ರತಿಕ್ರಿಯಿಸಿದ ಅವರು "ನೊಂದವರಿಗೆ ತುಂಬ ನೋವಾಗಿದೆ, ಆಕ್ರೋಶಕ್ಕೆ ಒಳಗಾಗಿದ್ದಾರೆ. ನಮ್ಮ ಸರ್ಕಾರ ಸಮರ್ಥವಾಗಿದೆ, ಹತ್ಯೆಗಳು ಆದಾಗ ಆರೋಪಿಗಳನ್ನ ಬಂಧಿಸುವ ಕೆಲಸವಾಗಿದೆ. ಪ್ರವೀಣ್ ಹತ್ಯೆ ಕೇಸಿನಲ್ಲೂ ಆರೋಪಿಗಳನ್ನ ಬಂಧಿಸುವ ಕೆಲಸವಾಗಿದೆ. ಈ ರೀತಿಯ ಘಟನೆ ನಡೆಯಬಾರದು ಎಂಬ ಅಪೇಕ್ಷೆ ಕಾರ್ಯಕರ್ತರದ್ದು, ಯುಪಿಗಿಂತಲೂ ಐದು ಹೆಜ್ಜೆ ಮುಂದೆ ಹೋಗುತ್ತೇವೆ .ಯುಪಿ ಗಿಂತ ಒಳ್ಳೇ ಮಾಡಲ್ ಕೊಡುತ್ತೇವೆ. ಕರ್ನಾಟಕ ಇತರರಿಗೆ ಮಾದರಿಯಾಗಿರುತ್ತದೆ. ಜನರು ಭಾವನೆ ವ್ಯಕ್ತಪಡಿಸಲೇ ಬೇಕು ತಾಳ್ಮೆಗೂ ಇತಿಮಿತಿ ಇದೆ. ಇಲ್ಲಿಯವರೆಗೂ ಸಹಿಸಿಕೊಂಡಿದ್ದೇವೆ ಮುಂದೆ ಸಹಿಸಿಕೊಳ್ಳುವುದಿಲ್ಲ" ಎಂದರು.
ಹತ್ಯೆಯಾದ ಪ್ರವೀಣ್ ಕುಟುಂಬಕ್ಕೆ ವೈಯಕ್ತಿಕ 10 ಲಕ್ಷ ರೂ. ನೆರವು ಘೋಷಿಸಿದ ಅಶ್ವತ್ಥ ನಾರಾಯಣ