Oct 10, 2022, 6:40 PM IST
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ.ಸುಧಾಕರ್ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಮಹಿಳೆಯೊಬ್ಬರು ಮೈಮೇಲೆ ದೇವರು ಬಂದಂತೆ ವರ್ತಿಸಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಮಹಿಳೆ ತನ್ನ ಮೇಲೆ ಗ್ರಾಮದ ಮಹೇಶ್ವರಮ್ಮ ದೇವಿ ಬಂದಿದ್ದಾಳೆ. ದೇವಸ್ಥಾನ ಕಾಮಗಾರಿ ನಿರ್ವಹಿಸಲು ಸಚಿವರಿಗೆ ತಿಳಿಸಬೇಕು ತಾನು ದೇವಿ ಮಹೇಶ್ವರಮ್ಮ ಅವತಾರ ತನ್ನನ್ನು ಯಾರು ತಡೆಯಬೇಡಿ ಎಂದು ಅರಚತೊಡಗಿದಳು. ಮಹಿಳೆಯ ಈ ವರ್ತನೆಯಿಂದ ಕಾರ್ಯಕ್ರಮಕ್ಕೆ ತೊಂದರೆ ಆಗಬಾರದೆಂದು ತಕ್ಷಣ ಪೊಲೀಸರು ಮಹಿಳೆಯನ್ನು ಕರೆದುಕೊಂಡು ಹೋಗಿ ಸಮಾಧಾನಪಡಿಸಿದ್ದರಿಂದ ಈ ಘಟನೆ ಸಚಿವ ಸುಧಾಕರ್ ಗಮನಕ್ಕೆ ಬಂದಿಲ್ಲ ಎಂದು ತಿಳಿದುಬಂದಿದೆ.