ರೇಣುಕಾಸ್ವಾಮಿ ಹತ್ಯೆ ಪ್ರಕರಣ ತನಿಖೆ ಬಳಿಕ ವರದಿ ಬರುತ್ತೆ, ಕಾನೂನು ಕ್ರಮ ಆಗುತ್ತೆ: ಗೃಹ ಸಚಿವ ಜಿ. ಪರಮೇಶ್ವರ್​

Jun 17, 2024, 12:14 PM IST

ಬೆಂಗಳೂರು: ದರ್ಶನ್ & ಗ್ಯಾಂಗ್‌​ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ(Renukaswamy murder case) ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಗೃಹ ಸಚಿವ ಜಿ.ಪರಮೇಶ್ವರ್(G. Parameshwar)​ ಪ್ರತಿಕ್ರಿಯೆ ನೀಡಿದ್ದಾರೆ. ಕೊಲೆ ಪ್ರಕರಣ ಕುರಿತು ಈಗಾಗಲೇ ತನಿಖೆ ನಡೀತಿದೆ. ತನಿಖೆಯಾದ ಬಳಿಕ ವರದಿ ಬರತ್ತೆ, ಕಾನೂನು ಕ್ರಮ ನಡೆಯುತ್ತೆ. ಯಾರ ಮುಲಾಜು ಇಲ್ಲದೆ ಕಾನೂನು ಕ್ರಮ ತೆಗೆದುಕೊಳ್ತೇವೆ. ಈಗಾಗಲೇ ಕೇಸ್​ ಕುರಿತು ನಾನು, ಸಿಎಂ ಹೇಳಿದ್ದೇವೆ. ಈ ಕೇಸ್‌​ನಲ್ಲಿ ಯಾರ ರಕ್ಷಣೆ, ಸಾಫ್ಟ್ ಕಾರ್ನರ್​ ಇಲ್ಲ. ಈಗಾಗಲೇ​ ಸಮರ್ಥ ಅಧಿಕಾರಿಗಳ ನೇಮಕ ಆಗಿದೆ. ಇಲಾಖೆಯ ತನಿಖೆಯಲ್ಲಿ ಮಧ್ಯ ಪ್ರವೇಶ ಮಾಡಲ್ಲ ಎಂದು ಅವರು ಹೇಳಿದ್ದಾರೆ. ತನಿಖೆ ನಡೆಯುತ್ತಿದೆ, ಬಹಿರಂಗವಾಗಿ ಹೇಳಲು ಆಗಲ್ಲ. ವರದಿ ಬಂದ ಬಳಿಕ ಕಾನೂನು ಪ್ರಕಾರ ಕ್ರಮ ಆಗಲಿದೆ. ಆಡಳಿತಾತ್ಮಕವಾಗಿ ಗಿರೀಶ್ ನಾಯ್ಕ್ ತನಿಖಾ ಅಧಿಕಾರಿಗಳ ಬದಲಾವಣೆ ಮಾಡುತ್ತೇವೆ. ಸಮರ್ಥವಾಗಿರುವ ಅಧಿಕಾರಿಗಳನ್ನು ಹಾಕುತ್ತೇವೆ. ಪ್ರಕರಣವನ್ನು ಪೊಲೀಸ್ ಇಲಾಖೆಯೇ ನೋಡಿಕೊಳ್ಳುತ್ತೆ. ನಾವ್ಯಾರು ಕೂಡ ಸೂಚನೆ ನೀಡಿಲ್ಲ ಎಂದು ಪರಮೇಶ್ವರ್‌ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ಇಂದು ಸಿಐಡಿ ವಿಚಾರಣೆಗೆ ಮಾಜಿ ಸಿಎಂ ಹಾಜರ್‌ !