Mar 7, 2020, 1:18 PM IST
ಬಾಗಲಕೋಟೆ(ಮಾ.07): ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಗ್ರಾಮದ ಮಾಲಾ ಎಂಬುವರ ಮಗ ಸುದೀಪ್ ಎಂಬ ಯುವಕ ಎರಡೂ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಸುದೀಪ್ ಕುಟುಂಬ ಕಡು ಬಡವರಾಗಿದ್ದರಿಂದ ಚಿಕಿತ್ಸೆಗೆ ದುಡ್ಡಿನ ಸಮಸ್ಯೆ ಎದುರಾಗಿದೆ.
ಹೇಗಾದರೂ ಮಾಡಿ ಸುದೀಪ್‌ನನ್ನ ಉಳಿಸಿಕೊಳ್ಳಲು ಆತನ ಸ್ನೇಹಿತರು ಮುಂದಾಗಿದ್ದಾರೆ. ತಮ್ಮ ನೆಚ್ಚಿನ ಗೆಳೆಯನ್ನ ಉಳಿಸಿಕೊಳ್ಳಲು ಸ್ನೇಹಿತರು ದೇಣಿಗೆ ಸಂಗ್ರಹಿಸಲು ಮುಂದಾಗಿದ್ದಾರೆ. ಈ ಗೆಳೆಯರ ಬಳಗ ಸುದೀಪ್‌ನ ಸಹಾಯ ಹೇಗೆಲ್ಲ ನಿಂತಿದೆ ಎಂಬುದರ ಮಾಹಿತಿ ಈ ವಿಡಿಯೋದಲ್ಲಿದೆ.