ಸಿಎಂ ಸಿದ್ದರಾಮಯ್ಯ ಕನಸಿನ ಕ್ಯಾಂಟೀನ್‌ಗೆ ವಿಘ್ನ: ತುಮಕೂರಿನಲ್ಲೇ 4 ಇಂದಿರಾ ಕ್ಯಾಂಟೀನ್ ಸ್ಥಗಿತ

Aug 23, 2023, 12:01 PM IST

ಇಂದಿರಾ ಕ್ಯಾಂಟೀನ್ ಹಸಿದವರ, ಬಡವರ ಹೊಟ್ಟೆ ತುಂಬಿಸುವ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ..ಅದರಲ್ಲೂ ಸಿಎಂ ಸಿದ್ದರಾಮಯ್ಯ(Siddaramaiah) ಕನಸಿನ ಕೂಸು..ಆದ್ರೆ ಈ ಯೋಜನೆ ಗೃಹಸಚಿವರ ತವರಿನಲ್ಲೇ ಹಳ್ಳ ಹಿಡಿದಿದೆ. ತುಮಕೂರು ನಗರದಲ್ಲೇ 4 ಇಂದಿರಾ ಕ್ಯಾಂಟೀನ್ಗೆ(Indira Canteen) ಬೀಗ ಬಿದ್ದಿದೆ. ಮೊನ್ನೆ ಕ್ಯಾಬಿನೆಟ್‌ನಲ್ಲಿ ಹೊಸ 188 ಇಂದಿರಾ ಕ್ಯಾಂಟೀನ್‌ಗೆ ಕೋಟಿ ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ಆದ್ರೆ ಕಾರ್ಯನಿರ್ವಹಿಸುತ್ತಿರುವ ಕ್ಯಾಂಟೀನ್‌ ಸಿಬ್ಬಂದಿಗೆ ಸಂಬಳ ಇಲ್ಲದ ಪರಿಸ್ಥಿತಿ ಬಂದಿದೆ. ತುಮಕೂರು(Tumkur) ನಗರದ ಕ್ಯಾತಸಂದ್ರ, ಶಿರಾಗೇಟ್‌, ಮಂಡಿಪೇಟೆ ಹಾಗೂ ಪಾಲಿಕೆ ಆವರಣದಲ್ಲಿ 4 ಕ್ಯಾಂಟೀನ್ ಇವೆ..ಇದರಲ್ಲಿ 25ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡ್ತಿದ್ದು ಕಳೆದ 8 ತಿಂಗಳಿಂದ ಸಂಬಳವೇ ನೀಡಿಲ್ಲ..ಇದ್ರಿಂದ ಏಕಏಕಿ ಆಕ್ರೋಶಗೊಂಡ ಸಿಬ್ಬಂದಿ ಮಾಡಿದ ಅಡುಗೆ ಅಲ್ಲೇ ಬಿಟ್ಟು ಆಕ್ರೋಶ ಹೊರಹಾಕಿದ್ರು. ತುಮಕೂರಿನ ಇಂದಿರಾ ಕ್ಯಾಂಟೀನ್ ಉಸ್ತುವಾರಿಯನ್ನ ರಿವಾರ್ಡ್ಸ್‌ ಕಂಪನಿಗೆ ಸರ್ಕಾರ ಗುತ್ತಿಗೆ ನೀಡಿದೆ. ಇಂದಿರಾ ಕ್ಯಾಂಟಿನ್‌ಗೆ ಊಟ ಸೇರಿದಂತೆ ಅಲ್ಲಿನ ಸಿಬ್ಬಂದಿಗೆ ಸಂಬಳ ಕೊಡೋದು ಕೂಡ ಇದೇ ಸಂಸ್ಥೆ. ಆದ್ರೆ ರಿವಾರ್ಡ್ಸ್ ಕಂಪನಿಗೆ ಸರ್ಕಾರ ಬಿಲ್ ಬಾಕಿ ಉಳಿಸಿಕೊಂಡಿದ್ಯಂತೆ. ಅದಕ್ಕೆ ಕಂಪನಿ ಕೂಡ ಕ್ಯಾಂಟೀನ್ ಸಿಬ್ಬಂದಿಗೆ ಸಂಬಳ ಕೊಡುತ್ತಿಲ್ಲವಂತೆ. ಇಂದಿರಾ ಕ್ಯಾಂಟೀನ್ ಸಿಬ್ಬಂದಿ ಪ್ರತಿಭಟನೆ ಮಾಡ್ತಿದ್ರೆ..ಇತ್ತ ಪಾಲಿಕೆ ಅಧಿಕಾರಿಗಳು ಬೇರೆ ಸಿಬ್ಬಂದಿ ಕರೆಸಿ ಕ್ಯಾಂಟೀನ್‌ ಓಪನ್ ಮಾಡಿಸಿದ್ರು.

ಇದನ್ನೂ ವೀಕ್ಷಿಸಿ:  ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ಅಪ್ಪ, ಮಗ: ಕೂತು ಬಗೆಹರಿಸಬೇಕಿದ್ದ ಸಮಸ್ಯೆ ಮರ್ಡರ್‌ನಲ್ಲಿ ಅಂತ್ಯ !