Nov 7, 2022, 10:56 AM IST
ಅಸಡ್ಡೆ ತೋರಿಸುವ ಪಿಯು ಉಪನ್ಯಾಸಕರ ವಿರುದ್ಧ ಶಿಕ್ಷಣ ಇಲಾಖೆ ಅಲರ್ಟ್ ಆಗಿದ್ದು, ಸ್ಟೂಡೆಂಟ್ಸ್ ಬಗ್ಗೆ ಡೋಂಟ್ ಕೇರ್ ಅಂದ್ರೆ ಹಾಗೂ ಮೌಲ್ಯಮಾಪನದಲ್ಲಿ ಎಡವಟ್ಟು ಮಾಡಿದ್ರೆ ಕೆಲಸಕ್ಕೆ ಕುತ್ತು ಬರಲಿದೆ. 2022-23ನೇ ಸಾಲಿನಿಂದ ನಿರ್ಲಕ್ಷ್ಯ ತೋರಿಸಿದರೆ ಗೇಟ್ ಪಾಸ್ ಸಿಗಲಿದೆ. ಇಷ್ಟು ದಿನ ಮೌಲ್ಯಮಾಪನದಲ್ಲಿ ತಪ್ಪಾದ್ರೆ ದಂಡ ಬೀಳ್ತಿತ್ತು. 2021-22ರಲ್ಲಿ ಮೌಲ್ಯಮಾಪನದಲ್ಲಿ ನಿರ್ಲಕ್ಷ್ಯ ತೋರಿದ ಎಂಟು ಉಪನ್ಯಾಸಕರಿಗೆ ಶಿಕ್ಷಣ ಇಲಾಖೆ ಗೇಟ್ ಪಾಸ್ ನೀಡಿದೆ. ಇಂಗ್ಲಿಷ್, ಭೌತ ಶಾಸ್ತ್ರದಲ್ಲಿ ಅಸಡ್ಡೆ ತೋರಿದವರನ್ನು ಅಮಾನತು ಮಾಡಲಾಗಿದೆ. ಕಳೆದ ತಿಂಗಳು ನಡೆದ SSLC ಹಾಗೂ PUC ಪರೀಕ್ಷೆಗಳ ಪೂರ್ವ ತಯಾರಿ ಸಭೆಯಲ್ಲಿ ಮೌಲ್ಯಮಾಪನದಲ್ಲಿ ತಪ್ಪೆಸಗಿದ್ರೆ ಕಠಿಣ ಕ್ರಮ ಕೈಗೊಳ್ಳಲು ನಿರ್ಧಾರಿಸಲಾಗಿದೆ.