Apr 21, 2020, 11:26 AM IST
ಬೆಂಗಳೂರು (ಏ. 21): ಕಿಲ್ಲರ್ ಕೊರೋನಾಗೆ ಕಲಬುರ್ಗಿಯಲ್ಲಿ 4 ನೇ ವ್ಯಕ್ತಿ ಸಾವನ್ನಪ್ಪಿದ್ದಾರೆ. ಜ್ವರ, ನಿಶ್ಯಕ್ತಿ, ಪಾರ್ಕಿನ್‌ಸನ್‌ನಿಂದ ಬಳಲುತ್ತಿದ್ದ 80 ವರ್ಷದ ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಕೊರೊನಾ ವೈರಸ್‌ಗೆ ಒಟ್ಟು 17 ಮಂದಿ ಸಾವನ್ನಪ್ಪಿದ್ದಾರೆ.
ಉ. ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಆರೋಗ್ಯ ಸ್ಥಿತಿ ಗಂಭೀರ?
ಜ್ವರ, ನಿಶ್ಯಕ್ತಿಯಿಂದಾಗಿ ವೃದ್ಧ ಆಸ್ಪತ್ರೆಗೆ ದಾಖಲಾಗಿದ್ದರು. ನಿನ್ನೆ ಬೆಳಿಗ್ಗೆ ವಿಧಿವಶರಾದರು. ನಿನ್ನೆ ರಾತ್ರಿ ಕೋವಿಡ್ 19 ಪಾಸಿಟೀವ್ ಇರುವ ವರದಿ ಬಂದಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಟ್ವೀಟ್ ಮಾಡಿದ್ದಾರೆ.