Chikkamagaluru: ಕಾಡಾನೆ ಹಾವಳಿ ತಡೆಯಲು ರೈತರ ಹೊಸ ಪ್ರಯೋಗ ಸಕ್ಸಸ್..!

Mar 4, 2022, 5:16 PM IST

ಚಿಕ್ಕಮಗಳೂರು (ಮಾ.04):  ಕಾಡಾನೆ ಹಾವಳಿಯಿಂದ ಕಾಫಿನಾಡಿಗರು ಕಂಗಾಲಾಗಿ, ಕಂಗೆಟ್ಟಿದ್ದರು. ಇವತ್ ಓಡ್ಸಿದ್ ಆನೆಗಳ ಹಿಂಡು ಒಂದೇ ವಾರ ಮತ್ತದೇ ಜಾಗದಲ್ಲಿ ಪ್ರತ್ಯಕ್ಷ. ಅತ್ತ ಅಧಿಕಾರಿಗಳು ರೈತರ ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಇತ್ತ ಕಾಡಾನೆಗಳ ಹಾವಳಿಯೂ ಕಡಿಮೆಯಾಗ್ತಿಲ್ಲ. ರೈತರಿಗೆ ಪ್ರಕೃತಿಯಿಂದ ಬೆಳೆ ಉಳಿಸಿಕೊಳ್ಳುವುದಕ್ಕಿಂತ ಕಾಡಾನೆ, ಕಾಡುಪ್ರಾಣಿಗಳಿಂದ ಬೆಳೆ ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿತ್ತು. ಅಧಿಕಾರಿಗಳಿಗೆ ಪತ್ರ ಮೇಲೆ ಪತ್ರ ಬರೆದ ರೈತರೇ ಇದೀಗ ಆನೆ ಹಾವಳಿಗೆ ಬ್ರೇಕ್ ಹಾಕೋದಕ್ಕೆ ಹೊಸ ಮಾಸ್ಟರ್ ಪ್ಲಾನ್ ಮಾಡಿಕೊಂಡಿದ್ದಾರೆ. ಆನೆ ಹಾವಳಿಯೂ ತಕ್ಕಮಟ್ಟಿಗೆ ಕಡಿಮೆಯಾಗಿದೆ. 

Chitradurga: ಎರಡ್ಮೂರು ವರ್ಷಗಳಿಂದ ರೈತರಿಗೆ ತಲುಪದ ಬೆಳೆ ವಿಮೆ, ಫಸಲ್ ಭೀಮಾ ಯೋಜನೆ

 ಕಾಫಿನಾಡಲ್ಲಿ ಮೂಡಿಗೆರೆ ತಾಲೂಕಿನಲ್ಲಿ ಕಾಡಾನೆಗಳ ಅಬ್ಬರ ಜೋರಿತ್ತು. ಹಲವು ವರ್ಷಗಳಿಂದ ಇದೆ. ಈಗಲೂ ಇದೆ. ಹಳ್ಳಿಗಳಲ್ಲಿ ರೈತರಂತೆ ಠಿಕಾಣಿ ಹೂಡಿವೆ. ಆನೆಯಿಂದ ನಾಲ್ಕೈದು ಜನ ಪ್ರಾಣ ಕೂಡ ಕಳೆದುಕೊಂಡಿದ್ದಾರೆ. ಈಗ ಚಿಕ್ಕಮಗಳೂರಿನ ಹಂಪಾಪುರ, ಬೀಕನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲೂ ಆನೆ ಹಾವಳಿ ಮಿತಿ ಮೀರ್ತಿದೆ. ವಾರಕ್ಕೆರಡು ಬಾರಿ ಫ್ಯಾಮಿಲಿ ಸಮೇತ ಬಂದೋಗೋದು ಫಿಕ್ಸ್ ಆಗಿದೆ. ಹಾಗಾಗಿ, ಗುಡ್ಡಗಳ ಪಕ್ಕದಲ್ಲಿರೋ ಜಮೀನುಗಳಲ್ಲಿ ಕಾಡಾನೆಗಳ ದಾಳಿಯಾಗದಂತೆ ರೈತರು ಡಿಜೆ ಸೌಂಡ್ ಮೊರೆ ಹೋಗಿದ್ದಾರೆ. ಸುತ್ತಮುತ್ತಲಿನ ಹೊಲ-ಗದ್ದೆ-ತೋಟಗಳಲ್ಲಿ ಮೂವತ್ತಕ್ಕೂ ಹೆಚ್ಚು ಮೈಕ್‌ಗಳನ್ನ ಹಾಕಿದ್ದಾರೆ. ಕೆಲವೆಡೆ ಸಂಜೆ 6 ಗಂಟೆಯಾಗುತ್ತಿದ್ದಂತೆ ಡಿಜೆ ಸೌಂಡ್ ಅನ್ ಆಗುತ್ತೆ. ಮೈಕಿನಲ್ಲಿ ಜನ ಮಾತನಾಡುವ ಹಾಗೆ, ಪ್ರಾಣಿಗಳು ಕೂಗುವ ಹಾಗೆ, ಪಟಾಕಿ ಸಿಡಿಯುವಂತೆ ನಿರಂತರ ಸೌಂಡ್ ಬರುತ್ತಿರುತ್ತೆ. ಶಬ್ಧಕ್ಕೆ ಹೆದರುವ ಕಾಡಾನೆಗಳು ಜಮೀನಿನತ್ತ ಬರಲ್ಲ ಅನ್ನೋದು ರೈತರೇ ಕಂಡುಕೊಂಡ ಮಾಸ್ಟರ್ ಪ್ಲಾನ್. 

ಒಟ್ಟಾರೆ, ಕಾಡಾನೆಗಳಿಂದ ನಲುಗಿ ಹೋಗಿರೋ ರೈತರು ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡರು ಅಧಿಕಾರಿಗಳು ಸ್ಪಂದಿಸದ ಹಿನ್ನೆಲೆ ಈ ತಾತ್ಕಾಲಿಕ ಐಡಿಯಾಕೆ ಮೊರೆ ಹೋಗಿದ್ದಾರೆ. ಆದ್ರೆ, ಆನೆಗಳಿಗೂ ಬುದ್ಧಿ ಇರುತ್ತೆ. ಆನೆಗಳಿಗೆ ಈ ಮೈಕ್ ನಮ್ಮನ್ನ ಯಾಮಾರಿಸೋಕೆ ಹಾಕಿರೋದು ಎಂದು ಗೊತ್ತಾದರೆ ಮೊದ್ಲು ಕಿತ್ತಾಕೋದು ಮೈಕ್ಗಳನ್ನ. ಆಗ ಮತ್ತೆ ಆನೆ ಹಾವಳಿ ಹೆಚ್ಚಾಗೋದ್ರಲ್ಲಿ ನೋ ಡೌಟ್. ಹಾಗಾಗಿ, ಅರಣ್ಯ ಇಲಾಖೆ ವೈಜ್ಞಾನಿಕವಾಗಿ ಕಾಡುಪ್ರಾಣಿಗಳು, ಆನೆಗಳಿಂದ ಜನರ ಜೀವ ಹಾಗೂ ಬೆಳೆ ಎರಡನ್ನೂ ಉಳಿಸೋದಕ್ಕೆ ಮುಂದಾಗಬೇಕೆಂಬುದು ಸ್ಥಳಿಯರ ಆಗ್ರಹವಾಗಿದೆ.