ಹುಲಿ ದಾಳಿಗೆ ಹಸು ಬಲಿ : ಶಾಶ್ವತ ಪರಿಹಾರಕ್ಕೆ ಗ್ರಾಮಸ್ಥರ ಆಗ್ರಹ

Aug 30, 2021, 2:50 PM IST

ಚಿಕ್ಕಮಗಳೂರು (ಆ.30):  ಚಿಕ್ಕಮಗಳೂರಿನಲ್ಲಿ ವ್ಯಾಘ್ರಗಳ ಅಟ್ಟಹಾಸ ಮುಂದುವರಿದಿದೆ. ಹುಲಿಯ ದಾಳಿಗೆ ಹಸು ಬಲಿಯಾಗಿದೆ. 10 ದಿನದ ಹಿಂದಷ್ಟೆ ಕರುವಿಗೆ ಜನ್ಮ ನೀಡಿದ್ದ ಹಸು ಹುಲಿ ದಾಳಿಯಿಂದ ಸಾವಿಗೀಡಾಗಿದೆ. 

ಅಳಿವಿನಂಚಿಂದ ಚೇತರಿಸಿದ ಹುಲಿ ಸಂತತಿ: ರಾಜ್ಯಕ್ಕೆ ಎರಡನೇ ಸ್ಥಾನ

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಭಾರತಿಯಲ್ಲಿ ಈ ಘಟನೆ ನಡೆದಿದ್ದು,  ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಲ್ಲಿ ಪದೆ ಪದೇ ಈ ರೀತಿಯ ಘಟನೆಗಳಾಗುತ್ತಿದ್ದು ಶಾಶ್ವತ ಪರಿಹಾರ ಒದಗಿಸಲು ಗ್ರಾಮಸ್ಥರಿಂದ ಒತ್ತಾಯ ಕೇಳಿ ಬಂದಿದೆ.