Chikkamagaluru: ದಿಢೀರ್ ಬೆಲೆ ಕುಸಿತ, ಎಲೆಕೋಸು ಬೆಳೆದ ರೈತ ಕಂಗಾಲು

Mar 21, 2022, 12:54 PM IST

ಪ್ರತಿಕೂಲ ಹವಾಮಾನವಿದ್ದರೂ ಕೂಡ ಅನ್ನದಾತನಿಗೆ ಸಂಕಷ್ಟಮಾತ್ರ ತಪ್ಪಿಲ್ಲ.ಕಳೆದ ವರ್ಷ ಉತ್ತಮ ಮಳೆ ಬಂದ ಹಿನ್ನಲೆ ಸಾಲಮಾಡಿ ಬೆಳೆ ಬೆಳೆದ ರೈತ ಅತಂತ್ರನಾಗಿದ್ದಾನೆ. ಎಲೆಕೋಸಿನ ಬೆಲೆ ದಿಢೀರನೆ ಕುಸಿತ ಕುಂಡಿದೆ. ವರ್ತಕರು ಎಲೆಕೋಸು ಬೆಳೆಗಾರರಿಂದ ಕೆ.ಜಿ,ಗೆ  50 ಪೈಸೆಯಂತೆ ಖರೀದಿಸುತ್ತಿರುವುದು ರೈತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಬೆಲೆ ಕುಸಿತದಿಂದ ಕಟಾವಿಗೆ ಬಂದಿದ್ದ ಎಲೆಕೊಸುನ್ನು ರೈತರು ಹೊಲದಲ್ಲೇ ಬೇಸಾಯ ಮಾಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಬಯಲು ಸೀಮೆ ಪ್ರದೇಶದಲ್ಲಿ ನೀರಾವರಿ ಆಶ್ರಿತ ಕೃಷಿ ಭೂಮಿಯಲ್ಲಿ  ರೈತರು ಯಥೇಚ್ಚವಾಗಿ ತರಕಾರಿ ಬೆಳೆಗಳನ್ನು ಬೆಳೆಯುತ್ತಾರೆ. ಮೂರೂವರೆ ತಿಂಗಳ ಅವಧಿಯ ಎಲೆ ಕೋಸನ್ನು ಕೂಡ ಬೆಳೆಗಾರರಿಗೆ ಕೈ ತುಂಬ ಹಣ ತಂದುಕೊಡುವಂತಹದ್ದಾಗಿದೆ. ಹೀಗಾಗಿ ಸಾವಿರಾರು ಎಕರೆ ಪ್ರದೇಶದಲ್ಲಿ ಕಡೂರು, ಚಿಕ್ಕಮಗಳೂರು, ತರೀಕೆರೆ ತಾಲೂಕುಗಳಲ್ಲಿ ಬೆಳೆಯಲಾಗಿದೆ. ಹೀಗೆ ಚಿಕ್ಕಮಗಳೂರಿನ ಹಿರೇಗೌಜದಲ್ಲೂ ರೈತ ತನು 2 ಎಕ್ರೆ ಪ್ರದೇಶದಲ್ಲಿ ಎಲೆ ಕೋಸು ಬೆಳೆದ್ದರು.ಎಲೆಕೋಸಿಗೆ ಮಾರುಕಟ್ಟೆಯಲ್ಲಿ ಬೆಲೆಯೇ ಇಲ್ಲದಂತಾಗಿದೆ. ಇದರಿಂದ ಆಕ್ರೋಶಗೊಂಡ ರೈತ ತನು ಟ್ರಾಕ್ಟರ್ ನಲ್ಲಿ ಬೇಸಾಯ ಮಾಡಿ ದರ ಕುಸಿತದ ಬಗ್ಗೆ ಆಕ್ರೋಶವನ್ನು ಹೊರಹಾಕಿದ್ದಾರೆ.

Chikkamagaluru ಬೆಳವಾಡಿ ಗ್ರಾಮದಲ್ಲಿ ಸೂರಿಗಾಗಿ ಪರಿತಪಿಸುತ್ತಿರುವ ಕುಟುಂಬದ ಕರುಣಾಜನಕ ಕತೆ

ಕಳೆದ ಭಾರಿ ಉತ್ತಮ ಲಾಭ ಲಭಿಸಿದ್ದರಿಂದ ಚಿಕ್ಕಮಗಳೂರು ಜಿಲ್ಲೆಯ ಬಹುತೇಕ ರೈತರು ಹೆಚ್ಚಿನ ಪ್ರಮಾಣದಲ್ಲಿ ಎಲೆಕೊಸುನ್ನು ಬೆಳೆದ್ರು. ಆದ್ರೆ ಸದ್ಯ ಡಿಡೀರ್ ಬೆಲೆ ಕುಸಿತ ಕುಂಡಿರುವುದು ರೈತನಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಎಲೆಕೋಸುನ್ನು ಮಾರುಕಟ್ಟೆಗೆ ರೈತರು ತೆಗೆದುಕೊಂಡು ಹೊಂದರೆ ಕೆ.ಜೆ. 50 ಪೈಸ್ ಯಿಂದ 1ರೂನಂತೆ ಕೇಳಿತ್ತಾರೆ ,ಇದರಿಂದ ಮನನೊಂದ ರೈತರು ಹೊಲದಲ್ಲಿರುವ ಎಲೆಕೋಸುನ್ನು ಬೇಸಾಯಮಾಡಿ ಗೊಬ್ಬರವಾಗಿಯಾದ್ರೂ ಉಪಯೋಗಕ್ಕೆ ಬರಲಿ ಎಂಬ ನಿಲುವಿಗೆ ಬಂದಿದ್ಧಾರೆ.

ಉತ್ತಮ ಧಾರಣೆ  ಇರುವುದರಿಂದ ರೈತರು ಲಾಭದ ನಿರೀಕ್ಷೆಯಲ್ಲಿದ್ದರು ಆದರೆ ದಿಢೀರನೆ ಬೆಲೆ ಕುಸಿತವಾಗಿರುವುದು ರೈತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಸಾಲವನ್ನು ಮರುಪಾವತಿ ಮಾಡಲು ಆಗದ ಸ್ಥಿತಿಯಲ್ಲಿ ರೈತರದ್ದಾರೆ. ಮಾರುಕಟ್ಟೆಯಲ್ಲಿ ಬೆಲೆಯೇ ಇಲ್ಲದಂತಾಗಿದ್ದು, 80 ಕೆ.ಜಿ. ಚೀಲಕ್ಕೆ ಕೇವಲ 30ರಿಂದ 40 ರೂ.ಗಳಿದಿದೆ. ಬೆಳೆಗೆ ತಗುಲಿರುವ ವೆಚ್ಚ, ಕೂಲಿ ಎಲ್ಲಾ ಸೇರಿದ್ರೂ ಇದು ಸಂಪೂರ್ಣ ನಷ್ಟ ಎಂಬ ಕೊರಗು ರೈತರದ್ದಾಗಿದೆ.
 
ಹಿರೇಗೌಜ ಸೇರಿದಂತೆ ಚಿಕ್ಕಮಗಳೂರಿನ ತಾಲೂಕಿನಲ್ಲಿ ಹತ್ತು ಹಲವು ಹಳ್ಳಿಗಳಲ್ಲಿ ತರಕಾರಿ ಬೆಳೆದ ರೈತರು ಸಂಕಷ್ಟದಲ್ಲಿದ್ದಾರೆ.ತಾಲೂಕಿನಾದ್ಯಂತ 100 ಹೆಕ್ಟೇರ್‌ಗಿಂತ ಹೆಚ್ಚು ಜಮೀನಿನಲ್ಲಿ ಕೋಸು ಬೆಳೆಯಲಾಗಿದೆ. ಒಂದು ಚೀಲ ಎಲೆಕೊಸಿಗೆ ಮಾರುಕಟ್ಟೆಯಲ್ಲಿ 40 ರೂಪಾಯಿಯಿದ್ದು ಕೊಸು ಬೆಳೆಯಲು ತಗುಲಿದ ಖರ್ಚಿನಲ್ಲಿ ಕಾಲು ಭಾಗವು ಕೂಡ ದರವಿಲ್ಲದೇ ಇರುವುದು ರೈತರ ಆಕ್ರೋಶ ಕಾರಣವಾಗಿದೆ.