May 14, 2020, 12:17 PM IST
ಬೆಂಗಳೂರು(ಮೇ 14): ಕೊರೋನಾ ವೈರಸ್ ವ್ಯಾಪಿಸಿ ಲಾಕ್‌ಡೌನ್‌ನಿಂದಾಗಿ ಜನರ ಸಂಕಷ್ಟ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಸರ್ಕಾರ ತನ್ನ ಸಹಾಯ ಹಸ್ತ ಚಾಚಿದೆ. ಮೊನ್ನೆ ಮೋದಿ ಪ್ಯಾಕೇಜ್ ಘೋಷಿಸಿದ ಬೆನ್ನಲ್ಲೇ ಇದೀಗ ಯಡಿಯೂರಪ್ಪ ಅವರು ಎರಡನೇ ಪ್ಯಾಕೇಜ್ ಘೋಷಣೆಯಾಗುವ ಸಾಧ್ಯತೆ ಇದೆ.
ಇಂದು ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಕ್ಯಾಬಿನೆಟ್ ಮೀಟಿಂಗ್ ನಡೆಯಲಿದೆ. ಇಂದು ರಾಜ್ಯದ ಎರಡನೇ ಪ್ಯಾಕೇಜ್ ಘೋಷಣೆಯಾಗುವ ಸಾಧ್ಯತೆ ಇದೆ. ಮೊದಲನೇ ಹಂತದಲ್ಲಿ ಸರ್ಕಾರ ನೆರವು ನೀಡಿದ್ದು ಈಗ ಎರಡನೇ ಹಂತದಲ್ಲಿ ಪ್ಯಾಕೇಜ್ ಘೋಷಣೆಯಾಗಲಿದೆ.
ಸ್ವಾವಲಂಬಿ ಭಾರತಕ್ಕೆ ಮದ್ದು ಯಾವುದೆಂದು ವಿವರಿಸಿದ ವಿತ್ತ ಸಚಿವೆ ನಿರ್ಮಲಾ!
ಈ ಬಾರಿ ಯಾರಿಗೆಲ್ಲ ಸರ್ಕಾರದ ನೆರವು ಸಿಗಲಿದೆ..? ಅರ್ಚಕರು, ಕರ್ಮಾರರು, ಅಕ್ಕಸಾಲಿಗರು, ಛಾಯಾಗ್ರಾಹಕರಿಗೆ ಈ ಬಾರಿ ನೆರವು ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇಲ್ಲಿದೆ ವಿಡಿಯೋ