ಕುಕ್ಕೆಯಲ್ಲಿ ರಥೋತ್ಸವ : ನಿಷೇಧವಿದ್ದರೂ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಭಕ್ತರು

Dec 20, 2020, 9:52 AM IST

 ಸುಬ್ರಹ್ಮಣ್ಯ (ಡಿ.20):  ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠೀ ಹಿನ್ನೆಲೆ  ನಿಷೇಧದ ಆದೇಶವಿದ್ದರೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರಿದ್ದಾರೆ.  ಸಾಮಾಜಿಕ ಅಂತರವೂ, ಮಾಸ್ಕ್ ಯಾವುದೂ ಇಲ್ಲದೇ ಅಧಿಕ ಸಂಖ್ಯೆಯಲ್ಲಿ ಸೇರಿದ್ದಾರೆ. 

ಕುಕ್ಕೆ ದೇವಾಲಯದ ವಿರುದ್ಧ ಗರಂ ಆಯ್ತು ಭಕ್ತ ವೃಂದ

ಬ್ರಹ್ಮರಥೋತ್ಸವ ನೋಡಲು  ಸಾವಿರಾರು ಭಕ್ತರು ಸೇರಿದ್ದು, ನಿಯಂತ್ರಿಸಲಾಗದೇ ಪೊಲೀಸರು ಸುಮ್ಮನಾಗಿದ್ದಾರೆ.  ಭಾರೀ ಜನಸಮೂಹದ ಮಧ್ಯೆ ಕುಕ್ಕೆ ಸುಬ್ರಹ್ಮಣ್ಯನ ಬ್ರಹ್ಮರಥೋತ್ಸವ ಜರುಗಿದೆ. ರಥಬೀದಿಯಲ್ಲಿ ನೂರಾರು ಭಕ್ತರು ರಥ ಎಳೆದಿದ್ದಾರೆ.