ಕಳೆದ 20 ವರ್ಷಗಳಿಂದ ಈ ಕುಟುಂಬಕ್ಕೆ ಸ್ವಂತ ಸೂರಿಲ್ಲ, ಹರಕಲು ಗುಡಿಸಲು, ದೀಪದಲ್ಲೇ ಬದುಕು!

Feb 3, 2021, 11:45 AM IST

ಬೆಂಗಳೂರು (ಫೆ. 03): ಒಂದು ಕಡೆ ಮುರಿದು ಬಿದ್ದ ಗುಡಿಸಲು, ಇನ್ನೊಂದು ಕಡೆ ಕಂಗಾಲಾಗಿ ಕುಳಿತಿರುವ ಮಕ್ಕಳು, ಇಂತದ್ದೊಂದು ದೃಶ್ಯ ಕಂಡು ಬಂದಿದ್ದು ತುಮಕೂರು ಜಿಲ್ಲೆ, ಹೆಬ್ಬೂರು ಹೋಬಳಿಯ ತೊಂಡಗೆರೆ ಗ್ರಾಮದಲ್ಲಿ. ಕಳೆದ 20 ವರ್ಷಗಳಿಂದ ಈ ದಲಿತ ಕುಟುಂಬಕ್ಕೆ ಸ್ವಂತದ್ದೊಂದು ಸೂರು ಇಲ್ಲದೇ ಹರಕಲು ಗುಡಿಸಲಿನಿದ್ದಾರೆ. ಜೀವನಾಧಾರಕ್ಕೆ ಕೂಲಿ ಮಾಡುತ್ತಿದ್ದಾರೆ. ಸರ್ಕಾರದಿಂದ ಪಡಿತರ ಒಂದು ಬಿಟ್ಟು ಮತ್ಯಾವ ಸೌಲಭ್ಯವೂ ಸಿಕ್ಕಿಲ್ಲ. ಈ ಬಗ್ಗೆ ಗ್ರಾಪಂಗೆ ಅರ್ಜಿ ಕೊಟ್ಟರೂ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. 

ಯುವರಾಜನಿಂದ ರಾಧಿಕಾ ಪಡೆದಿದ್ದು 60 ಲಕ್ಷವಲ್ಲ, ಪೊಲೀಸರ ಎದುರು ತಪ್ಪೊಪ್ಪಿಕೊಂಡ ಸ್ವಾಮಿ