Mar 6, 2023, 2:35 PM IST
ಯಾದಗಿರಿ ಜಿಲ್ಲೆಯ ಗುರುಮಠಕಲ್ ಪಟ್ಟಣದಲ್ಲಿ ಸೈಟ್ ಸಿಗುತ್ತೆ ಎನ್ನುವ ಭರವಸೆಯಲ್ಲಿ 30 ವರ್ಷಗಳಿಂದ ಫಲಾನುಭವಿಗಳು ಕಾಯುತ್ತಿದ್ದರು. ಆದ್ರೆ ಇವರಿಗೆ ಸಿಗಬೇಕಾದ ಸೈಟ್ ಮಾತ್ರ ಸಿಗಲಿಲ್ಲ. 1991-92ರ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಅಧಿಕಾರದ ಅವಧಿಯಲ್ಲಿ 131 ಬಡ ಫಲಾನುಭವಿಗಳನ್ನ ಗುರುತಿಸಿ ಪಟ್ಟಣ ಪಂಚಾಯತಿಯಿಂದ 20X30 ನಿವೇಶನ ನೀಡಲು ಹಕ್ಕುಪತ್ರ ವಿತರಣೆ ಮಾಡಿದೆ. ಆದ್ರೆ 30ವರ್ಷ ಕಳೆದ್ರು ಕೂಡ ಫಲಾನುಭವಿಗಳಿಗೆ ಜಾಗವನ್ನ ನೀಡದೆ ಅಧಿಕಾರಿ, ಜನಪ್ರತಿನಿಧಿಗಳು ಬಡ ಜನರ ಜೀವನದ ಜೊತೆ ಚೆಲ್ಲಾಟ ಆಡುತ್ತಿದ್ದರು.ಈ ಬಗ್ಗೆ ನಾಲ್ಕು ತಿಂಗಳ ಹಿಂದೆ ಬಿಗ್3ಯಲ್ಲಿ ವರದಿ ಪ್ರಸಾರ ಮಾಡಲಾಗಿತ್ತು, ವರದಿ ಪ್ರಸಾರ ಬೆನ್ನಲ್ಲೇ ಶಾಸಕ ನಾಗನಗೌಡ ಕಂದಕೂರು ಅವರು ಸೈಟ್ ವಿತರಣೆ ಮಾಡಿದ್ದಾರೆ .