BIG 3 Impact: ಗಂಗಾಯಿಕೊಪ್ಪ ಗ್ರಾಮದ ಶಾಲೆಗೆ ಸಿಕ್ತು ಹೊಸ ಲುಕ್: ವಿದ್ಯಾರ್ಥಿಗಳ ದಿಲ್ ಖುಷ್

Mar 13, 2023, 3:29 PM IST

ಹಾವೇರಿ ಜಿಲ್ಲೆ ಹಿರೇಕೆರೂರು BEO ಕಚೇರಿ ಮುಂದೆ ವಿದ್ಯಾರ್ಥಿಗಳು ಊಟ ಬಿಟ್ಟು  ಪ್ರತಿಭಟನೆ ಮಾಡಿದ್ದರು.  ಗಂಗಾಯಿಕೊಪ್ಪ ಗ್ರಾಮದ ಸರ್ಕಾರಿ ಶಾಲೆ  ಸಂಪೂರ್ಣ  ಶಿಥಿಲಾವಸ್ಥೆ ತಲುಪಿದ್ದು.ಮಳೆ ಬಂದ್ರೆ ಶಾಲೆಯೆಲ್ಲ ಸೋರಿ ವಿದ್ಯಾರ್ಥಿಗಳು ಮಳೆಯಲ್ಲೇ ಪಾಠ ಕೇಳ ಬೇಕಾದ ಸ್ಥತಿ ಇತ್ತು. ಈ ಬಗ್ಗೆ  ಬಿಗ್3 ವರದಿ ಪ್ರಸಾರ ಮಾಡಿದ್ದು, ಸುದ್ದಿ ಪ್ರಸಾರ ಆಗುತ್ತಿದ್ದಂತೆ  ಸ್ಥಳಕ್ಕೆ  ಹಿರೇಕೆರೂರು  ಬಿ.ಇ.ಒ ಶ್ರೀಧರ್, ರಟ್ಟಿಹಳ್ಳಿ ತಹಶೀಲ್ದಾರ್ ಅರುಣ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಹಾಗೆ   ಕೃಷಿ ಸಚಿವ ಬಿ.ಸಿ ಪಾಟೀಲ್  ಸೇರಿದಂತೆ,   ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ  ಶಿವರಾಮ್ ಹೆಬ್ಬಾರ್ ಕೂಡಾ ವರದಿಗೆ ಸ್ಪಂದಿಸಿದ್ದಾರೆ. ಈಗಾಗಲೇ 6 ಲಕ್ಷ ರೂಪಾಯಿ ವೆಚ್ಚದಲ್ಲಿ ಸೋರುತ್ತಿದ್ದ ಶಾಲಾ ಕೊಠಡಿಗಳಿಗೆ ಮೇಲ್ಚಾವಣಿ,  ಶಾಲಾ ಕೊಠಡಿಗಳ ರಿಪೇರಿ ಆಗಿದೆ. ಇನ್ನು ಶಾಲೆಗೆ ಹೊಸ ಶೌಚಾಲಯ ನಿರ್ಮಾಣಕ್ಕೂ  5 ಲಕ್ಷ 30,000 ರೂಪಾಯಿ ಹಣ ಮುಂಜಾರಾಗಿದೆ.ನರೇಗಾ ಯೋಜನೆಯಡಿ ಐದು ಲಕ್ಷದ ಮೂವತ್ತು ಸಾವಿರ ರೂಪಾಯಿ ವೆಚ್ಚದಲ್ಲಿ ಹೊಸ ಶೌಚಾಲಯ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಲಾಗಿದ್ದು  ಒಟ್ಟು ಶಾಲೆಗೆ ಸಿಕ್ಕ ಅನುದಾನ ಬರೋಬ್ಬರಿ  37 ಲಕ್ಷ ರೂಪಾಯಿ...