ಇದು 'ಬಿಗ್ 3' ಬಿಗ್ ಇಂಪ್ಯಾಕ್ಟ್: ಕೊನೆಗೂ 8 ಕುಟುಂಬಗಳಿಗೆ ಸಿಕ್ತು ಮನೆ

Nov 22, 2022, 3:41 PM IST

ಧಾರವಾಡ:ಧಾರವಾಡ ತಾಲೂಕಿನ ಯಾದವಾಡ ಗ್ರಾಮ ಪಂಚಾಯತಿ ವ್ಯಾಪ್ತಿಯ 8 ಮನೆಗಳು ಬ್ಲಾಕ್ ಆಗಿದ್ದವು. 2020ರಲ್ಲಿ ಮಳೆಗಳು ಬಿದ್ದಿದ್ದು, ಸರ್ಕಾರದಿಂದ 5 ಲಕ್ಷ ರೂ. ಹಣ ಕೂಡಾ ಬಿಡುಗಡೆಯಾಗಿತ್ತು. ಆದರೆ ಕೊರೋನಾ ಸಮಯದಲ್ಲಿ ಮನೆ ಕಟ್ಟದೆ ಇರೋದಕ್ಕೆ 8 ಮನೆಗಳ ಸೈಟ್'ನ್ನು ರಾಜೀವ್ ಗಾಂಧಿ ಹೌಸಿಂಗ್ ಬೋರ್ಡ್'ನವರು ಬ್ಲಾಕ್ ಮಾಡಿದ್ರು. ಸಧ್ಯ ಅವರಿಗೆ ಮನೆ ಕಟ್ಟಲು ಅನುಕೂಲವಾಗಿರಲಿಲ್ಲ. ಈ ಕುರಿತು ಬಿಗ್ 3 ಕಳೆದ ಮೇ 26 ರಂದು ವರದಿ ಮಾಡಿತ್ತು. ವರದಿ ಮಾಡಿದ ಬೆನ್ನಲ್ಲೇ ಜಿಲ್ಲಾ ಪಂಚಾಯತ ಸಿಇಓ ಸುರೇಶ ಇಟ್ನಾಳ್ ಮತ್ತು ಪಿಡಿಓ ಅವರ ಪ್ರಯತ್ನದಿಂದ ಸದ್ಯ 8 ಮನೆಗಳು ಬ್ಲಾಕ್ ಓಪನ್ ಆಗಿದ್ದು, ಪಿಡಿಓ ಎಲ್ಲಾ ಮನೆಗಳನ್ನು ಜಿ.ಪಿ.ಎಸ್ ಮಾಡಿ ಆರ್.ಜಿ.ಎಸ್.ಎಲ್ ಸೈಟ್'ಗೆ ಅಪ್ಲೋಡ್ ಮಾಡಿದ್ದಾರೆ. ಈ 8 ಫಲಾನುಭವಿಗಳಿಗೆ ಸರ್ಕಾರದಿಂದ ಬರಬೇಕಾದ ಎರಡನೇಯ ಹಾಗೂ ಮೂರನೇಯ ಕಂತಿನ ಹಣ ಬಿಡುಗಡೆಯಾಗಿದೆ. ಇನ್ನು ವೃದ್ಧ ಮಹಿಳೆ‌ ಮಮ್ತಾಜ್ ಅವರು ಕಣ್ಣೀರು ಹಾಕುತ್ತಾ ಸುವರ್ಣ ನ್ಯೂಸ್'ಗೆ ಧನ್ಯವಾದಗಳನ್ನ ಹೇಳಿದ್ದು, ಬ್ಯಾಂಕಿನಿಂದ ಹಣ ಡ್ರಾ ಮಾಡಿಕೊಂಡು ಮನೆ ನಿರ್ಮಾಣ ಮಾಡಲು ಮುಂದಾಗಿದ್ದಾರೆ.

ಬೆಂಗಳೂರಲ್ಲಿ Kedambadi Ramaiah Gowda ಸ್ಮಾರಕ, ಪಠ್ಯದಲ್ಲೂ ಸೇರ್ಪಡೆ: ಬಸವರಾಜ ಬೊಮ್ಮಾಯಿ