ಟಾಮ್ ಟಾಮ್ ಸಮೀಕ್ಷೆ: ವಿಶ್ವದಲ್ಲೇ ಅತಿ ಹೆಚ್ಚು ಟ್ರಾಫಿಕ್ ಸಿಟಿ, ಬೆಂಗಳೂರು ಸೆಕೆಂಡ್!

Apr 21, 2023, 4:56 PM IST

ಜನರು ಬೆಂಗಳೂರನ್ನು ತಮ್ಮ ವಾಸಸ್ಥಾನವನ್ನಾಗಿ ಆರಿಸಿಕೊಂಡಿರುವುದಕ್ಕೆ  ಬೆಂಗಳೂರಿನ ತಂಪಾದ ವಾತಾವರಣ ಒಂದೇ ಕಾರಣವಲ್ಲ. ಬದಲಾಗಿ ದಿನೇ ದಿನೇ ಸಿಲಿಕಾನ್ ಸಿಟಿ ಹೇರಳವಾಗಿ ಬೆಳೆಯುತ್ತಿರುವುದರಿಂದ. ಮೆಟ್ರೋ ರೈಲು, ಬ್ರಿಗೇಡ್ ರೋಡ್, ವಿದೇಶಿ ವಸ್ತುಗಳು, ಅತ್ಯುತ್ತಮ ಆಸ್ಪತ್ರೆಗಳು ಮಾತ್ರ ಬೆಂಗಳೂರನ್ನು ಆಕರ್ಷಿಸಲು ಕಾರಣವಲ್ಲ. ಈಗ ವಿಶ್ವದಲ್ಲೇ ಅತಿ ಹೆಚ್ಚಿನ ಟ್ರಾಫಿಕ್  ಸಿಟಿ ಎನ್ನುವ ಕುಖ್ಯಾತಿಗೆ ಪಾತ್ರವಾಗಿದೆ.
ಸಾವಿಲ್ಲದ ಮನೆ ಇಲ್ಲ ಎನ್ನುವ  ಹಾಗೆ ಟ್ರಾಫಿಕ್   ಇಲ್ಲದ ಏರಿಯಾ ಇಲ್ಲ ಅನ್ನೋ ಹಾಗಾಗಿ ಬಿಟ್ಟಿದೆ. ವಿಶ್ವದಲ್ಲಿ ಅತಿ ಹೆಚ್ಚು ಟ್ರಾಫಿಕ್  ಇರುವ ಸಿಟಿಗಳ ಪಟ್ಟಿಯಲ್ಲಿ ಬೆಂಗಳೂರು 2ನೇ ಸ್ಥಾನದಲ್ಲಿದೆ.  ಇತ್ತೀಚೆಗೆ ಜಿಯೋಲೊಕೇಶನ್ ತಂತ್ರಜ್ಞಾನ ಸಂಸ್ಥೆ ಟಾಮ್ ಟಾಮ್ ನಡೆಸಿದ ಸಮೀಕ್ಷೆಯಲ್ಲಿ. ವಿಶ್ವದ ಅತ್ಯಂತ ನಿಧಾನಗತಿಯ ನಗರಗಳಲ್ಲಿ ಬೆಂಗಳೂರು ಕೂಡ ಒಂದೆನಿಸಿಕೊಂಡಿದೆ. ಟ್ರಾಫಿಕ್ ಸಮಯದಲ್ಲಿ ಕೇವಲ 10 ಕಿ.ಮೀ ಪ್ರಯಾಣಿಸಲು ಸರಾಸರಿ ಅರ್ಧ ಗಂಟೆಗೂ ಅಧಿಕ ಸಮಯ ತೆಗೆದುಕೊಳ್ಳುತ್ತದೆ ಎಂದು ಸಮೀಕ್ಷೆ ತಿಳಿಸಿದೆ. ಇನ್ನು ಬೆಂಗಳೂರಿನ ಟ್ರಾಫಿಕನ್ನು ಕಳೆದ ಸಮೀಕ್ಷೆಗೆ ಹೋಲಿಸಿದರೆ ವರ್ಷಕ್ಕೆ 10 ಸೆಕೆಂಡ್ ಹೆಚ್ಚಾಗಿದೆ. ಇದರಿಂದ ಬೆಂಗಳೂರಿನ ಜನರು ಡ್ರೈವಿಂಗ್‌ನಲ್ಲಿ 260 ಗಂಟೆ ಕಳೆದರೆ, 134 ಗಂಟೆ ಟ್ರಾಫಿಕ್ ಜಾಮ್‌ ನಲ್ಲಿ ಸಿಕ್ಕಾಕಿಕೊಂಡಿರುತ್ತಾರೆ ಎಂದು ವರದಿ ಹೇಳಿದೆ.