ತೋಟದ ಮನೆಗೆ ಬೆಂಕಿ: ಜೀವದ ಹಂಗು ತೊರೆದು ಜಾನುವಾರು ರಕ್ಷಣೆಗೆ ಮುಂದಾದ ರೈತ... ವಿಡಿಯೋ ವೈರಲ್‌

Jan 20, 2022, 2:31 PM IST

ಬೆಳಗಾವಿ: ಖಾನಾಪುರ ತಾಲೂಕಿನ‌ ಅವರೊಳ್ಳಿ ಗ್ರಾಮದಲ್ಲಿ ತೋಟದ ಮನೆಗೆ ಬೆಂಕಿ ಬಿದ್ದಿದ್ದು, ಪರಿಣಾಮ ಬೆಂಕಿಯ ನಡುವೆ ಸಿಲುಕಿದ್ದ  ಜಾನುವಾರುಗಳನ್ನು ರಕ್ಷಿಸಲು  ರೈತರೊಬ್ಬರು ಹರಸಾಹಸ ಪಟ್ಟಿದ್ದಾರೆ. ನವರತ್ನ ಜೋಳದ ಎಂಬುವವರಿಗೆ ಸೇರಿದ ತೋಟದ ಮನೆಗೆ ತಡರಾತ್ರಿ ಆಕಸ್ಮಿಕವಾಗಿ  ಬೆಂಕಿ ಬಿದ್ದು ಹೊತ್ತಿ ಉರಿಯಲು ಶುರುವಾಗಿದೆ.

ಈ ವೇಳೆ ಜಾನುವಾರುಗಳ ರಕ್ಷಣೆಗಾಗಿ ಜೀವವನ್ನು ಲೆಕ್ಕಿಸದೇ ಬೆಂಕಿಯಲ್ಲಿ ನುಗ್ಗಿದ ರೈತ ಜಾನುವಾರುಗಳ ರಕ್ಷಣೆಗೆ ಮುಂದಾಗಿದ್ದಾರೆ. ಘಟನೆಯಲ್ಲಿ 1 ಕರು ಬೆಂಕಿಗಾಹುತಿಯಾಗಿದೆ. 2 ಎಮ್ಮೆ ಹಾಗೂ 1 ಹಸುವಿಗೆ ಗಂಭೀರ ಗಾಯವಾಗಿದೆ. ಅಲ್ಲದೇ ತೋಟದ ಮನೆಯಲ್ಲಿದ್ದ ಕೃಷಿ ಸಾಮಗ್ರಿಯೆಲ್ಲವೂ ಭಸ್ಮವಾಗಿದೆ. ಅಂದಾಜು 80 ಸಾವಿರಕ್ಕೂ ಹೆಚ್ಚು ಹಾನಿಯಾಗಿದ್ದು, ನಂದಗಡ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Farmer Land Auctioned in Rajasthan : ಬಡವ ಸಾಲ ಕಟ್ಟದಿದ್ರೆ ಭೂಮಿ ಹರಾಜು, ಶ್ರೀಮಂತ ಕಟ್ಟದಿದ್ರೆ ಲಂಡನ್ ಟಿಕೆಟು!