Oct 27, 2021, 5:19 PM IST
ವಿಜಯಪುರ (ಅ. 27): ಬಸವಕಲ್ಯಾಣ ಉಪಚುನಾವಣೆ ಹಿನ್ನೆಲೆಯಲ್ಲಿ, ಬಿಜೆಪಿ ಸರ್ಕಾರ ನಾಯಕರು ನೂತನ ಅನುಭವ ಮಂಟಪ ನಿರ್ಮಾಣಕ್ಕೆ ತರಾತುರಿಯಲ್ಲಿ ಶಂಕು ಸ್ಥಾಪನೆ ಮಾಡಿದ್ದರು. ಬಿಜೆಪಿ ಸರ್ಕಾರದ ಅವಧಿಯಲ್ಲೇ 650 ಕೋಟಿಯಲ್ಲಿ ಭವ್ಯವಾದ ನೂತನ ಅನುಭವ ಮಂಟಪ ನಿರ್ಮಾಣವಾಗಲಿದೆ ಎಂದು ಭರವಸೆ ನೀಡಿದ್ದರು.
ಅನುಭವ ಮಂಟಪಕ್ಕೆ 200 ಕೋಟಿ ರೂ ಹಂಚಿಕೆ
ಬಸವಕಲ್ಯಾಣದಲ್ಲಿ ಬಿಜೆಪಿಯ ಶಾಸಕರೇ ಗೆಲುವು ಸಾಧಿಸಿದ್ದಾರೆ. ಶಂಕು ಸ್ಥಾಪನೆ ಮಾಡಿ 9 ತಿಂಗಳು ಕಳೆದಿವೆ, ಆದರೆ ನಿರ್ಮಾಣ ಕಾರ್ಯ ಮಾತ್ರ ಪ್ರಾರಂಭ ಆಗದೇ ಇರೋದು ಬಸವಾದಿ ಭಕ್ತರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಮತ್ತೊಂದು ಕಡೆ ಈಗ ಮೂಲ ಅನುಭವ ಮಂಟಪವನ್ನು ಪತ್ತೆ ಹಚ್ಚಿ ಅದನ್ನೂ ಕೂಡ ಸಂರಕ್ಷಣೆ ಮಾಡುವಂತ ಕೆಲಸ ಸರ್ಕಾರ ಮಾಡಲಿ ಎಂಬ ಕೂಗು ಕೇಳಿ ಬಂದಿದೆ. ಆದರೆ ಬಿಜೆಪಿ ಸಚಿವರು ಮಾತ್ರ ನಾವು ನಮ್ಮ ಸರ್ಕಾರದ ಅವಧಿಯಲ್ಲೇ ಕಾಮಗಾರಿ ಪೂರ್ಣಗೊಳಿಸುತ್ತೇವೆ ಎನ್ನುತ್ತಿದ್ದಾರೆ.