Oct 2, 2021, 5:56 PM IST
ಬಾಗಲಕೋಟೆ (ಅ. 02): ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ಅನುಷ್ಠಾನಕ್ಕೆ ಆಗ್ರಹಿಸಿ ಎಸ್.ಆರ್.ಪಾಟೀಲ್ ನೇತೃತ್ವದಲ್ಲಿ ಅನಗವಾಡಿ ಘಟಪ್ರಭಾ ನದಿಯಿಂದ 24 ಕಿ.ಮೀ. ಪಾದಯಾತ್ರೆ ಪ್ರಾರಂಭವಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಕಾಮಗಾರಿ ವಿಳಂಬ ಮಾಡುತ್ತಿರುವ ಸಕಾ೯ರದ ವಿರುದ್ದ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರು ದಸರಾ ಉದ್ಘಾಟನೆಗೆ ಎಸ್‌ಎಂಕೆಗೆ ಸಿಎಂ ಆಹ್ವಾನ
'ಸಿಎಂ ಸೇರಿದಂತೆ ಜಲಸಂಪನ್ಮೂಲ ಸಚಿವರು ಉತ್ತರ ಕನಾ೯ಕದವರೇ ಇದ್ದಾರೆ. ಅವರು ಸ್ಫಂದಿಸ್ತಾರೆ ಅನ್ನೋ ವಿಶ್ವಾಸವಿದೆ. ಇದು ಅವರ ವಿರುದ್ಧದ ಸಂಘಷ೯ವೆಂದು ಭಾವಿಸಬಾರದು. ಹೀಗಾಗಿ ಶೀಘ್ರ ಯೋಜನೆಗಳನ್ನು ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಪಾದಯಾತ್ರೆ ಮಾಡುತ್ತಿದ್ದೇವೆ' ಎಂದು ಎಸ್.ಆರ್. ಪಾಟೀಲ್ ಹೇಳಿದ್ದಾರೆ.