Aug 26, 2021, 5:03 PM IST
ಬಾಗಲಕೋಟೆ, (ಆ.26):ಸಿದ್ದರಾಮಯ್ಯ ಕ್ಷೇತ್ರ ಬಾದಾಮಿಯಲ್ಲಿ ಹಿಂದೂ ದೇಗುಲಗಳ ಸಮುಚ್ಛಯ ತೆರವು ವಿವಾದವೊಂದು ಭುಗಿಲೆದ್ದಿದೆ. ಅತ್ತ ಹಾಸ್ಟೆಲ್ ಸೇರಿದಂತೆ ವಿವಿಧ ಕಟ್ಟಡಗಳಿಗಾಗಿ ದೇಗುಲಗಳು ಇದ್ದ ಜಾಗೆ ತೆರವಿಗೆ ತಾಲೂಕಾಡಳಿತ ಮುಂದಾಗಿದ್ದರೆ, ಇತ್ತ ಹಿಂದೂಪರ ಸಂಘಟನೆಗಳು ಸ್ವಕ್ಷೇತ್ರದ ಶಾಸಕ ಸಿದ್ದರಾಮಯ್ಯ ವಿರುದ್ದ ಸಿಡಿದೆದ್ದಿದ್ದಾರೆ.
ನಾನು ನಾಸ್ತಿಕನಲ್ಲ, ದೇವರ ಮೇಲೆ ಭಕ್ತಿ ಇದೆ: ಸಿದ್ದರಾಮಯ್ಯ
ತಾಕತ್, ಧಮ್ ಇದ್ದರೆ ದೇಗುಲ ತೆರವು ಮಾಡಲಿ ಅಂತ ಸವಾಲ್ ಹಾಕಿದ್ದಾರೆ. ಈ ಮದ್ಯೆ ಸವಾಲ್ ಹಾಕಿದವರಿಗೆ ಸಿದ್ದು ಅಭಿಮಾನಿಗಳಿಂದ ಬೆದರಿಕೆ ಕರೆಗಳು ಬರ್ತಿವೆಯಂತೆ. ಈ ಕುರಿತ ವರದಿ ಇಲ್ಲಿದೆ.