Feb 10, 2021, 4:04 PM IST
ಬಳ್ಳಾರಿ(ಫೆ.10): ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಬಳ್ಳಾರಿಗೆ ವಿಜಯನಗರವನ್ನ ಸೇರಿಸುತ್ತೇವೆ, ಬಳ್ಳಾರಿ ಜಿಲ್ಲೆ ಒಗ್ಗೂಡಿಸುವುದಕ್ಕೆ ಸಿದ್ದರಾಮಯ್ಯ ಜೊತೆ ಮಾತನಾಡಿದ್ದೇನೆ ಎಂದು ಕಾಂಗ್ರೆಸ್ ಬಿ. ನಾಗೇಂದ್ರ ಹೇಳಿದ್ದಾರೆ. 2023 ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಮತ್ತೆ ಅಖಂಡ ಬಳ್ಳಾರಿ ಜಿಲ್ಲೆಯನ್ನ ಮಾಡುತ್ತೇವೆ. ಹಂಪಿ, ಹೊಸಪೇಟೆಯ ಟಿಬಿ ಡ್ಯಾಂ ಇಲ್ಲದೆ ಬಳ್ಳಾರಿ ಜಿಲ್ಲೆಯನ್ನ ಊಹಿಸಲು ಅಸಾಧ್ಯ ಎಂದು ಹೇಳಿದ್ದಾರೆ.