May 14, 2020, 2:14 PM IST
ಬೆಂಗಳೂರು(ಮೇ.14): ಆಂಧ್ರ ಪ್ರದೇಶ ಮೂಲದ ಕೊರೋನಾ ವೈರಸ್ ಸೋಂಕಿತ 60 ವರ್ಷದ ವೃದ್ಧರೊಬ್ಬರು ಸಾವನ್ನಪ್ಪಿದ ಘಟನೆ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಂದು(ಗುರುವಾರ) ನಡೆದಿದೆ. ಲೋ ಬಿಪಿ, ಶುಗರ್ ತೊಂದರೆಯಿಂದ ಬಳಲುತ್ತಿದ್ದ ಕೊರೋನಾ ಸೋಂಕಿತ ಮೃತಪಟ್ಟಿದ್ದಾರೆ.
ದೇಶಕ್ಕೆ ಕೊರೋನಾ ಭಯ..ಇವರಿಗೆ ಮಾತ್ರ ಜಾತ್ರೆ ಚಿಂತೆ..!
ಈ ಮೂಲಕ ರಾಜ್ಯದಲ್ಲಿ ಮಹಾಮಾರಿ ಕೊರೋನಾಗೆ ಬಲಿಯಾದವರ ಸಂಖ್ಯೆ 34 ಕ್ಕೆ ಏರಿಕೆಯಾಗಿದೆ. ಹೀಗಾಗಿ ರಾಜ್ಯದ ಜನತೆ ಭಯಪಡುವಂತ ವಾತಾವರಣ ನಿರ್ಮಾಣವಾಗಿದೆ. ಒಂದ್ಕಡೆ ಲಾಕ್‌ಡೌನ್ ಸಡಿಲಿಕೆ, ಇನ್ನೊಂದ್ಕಡೆ ಹೆಚ್ಚಾಗುತ್ತಿರುವ ಕೊರೋನಾ ಪ್ರಕರಣಗಳ ಸಂಖ್ಯೆ. ಇದರಿಂದ ಜನರು ಮಾತ್ರ ಗೊಂದಲದಲ್ಲಿದ್ದಾರೆ.