Aug 28, 2022, 2:50 PM IST
ಚಿಕ್ಕಬಳ್ಳಾಪುರ ಜಿಲ್ಲೆಯ ಐತಿಹಾಸಿಕ ಪ್ರವಾಸಿ ತಾಣ ನಂದಿಬೆಟ್ಟ ವೀಕೆಂಡ್ ಹಿನ್ನೆಲೆ ಫುಲ್ ಆಗಿತ್ತು. ಟ್ರಾಫಿಕ್ ಸಮಸ್ಯೆಯಿಂದ ರಸ್ತೆಯಲ್ಲೆ ಕಾದು ಕಾದು ಸುಸ್ತಾದ ಪ್ರವಾಸಿಗರು. ವಾರಾಂತ್ಯದ ಕಾರಣ ನಂದಿಬೆಟ್ಟಕ್ಕೆ ಜನಸಾಗರ ಹರಿದು ಬಂತು. ಹೀಗಾಗಿ ಸುಮಾರು 4 ಕೀಮೀ ನಷ್ಟು ದೂರ ಫುಲ್ ಟ್ರಾಫಿಕ್ ಜಾಮ್ ಆಗಿ ನಂದಿಬೆಟ್ಟ ನೋಡಲು ಬಂದ ಪ್ರವಾಸಿಗರು ಪರದಾಟ ನಡೆಸಿದ್ರು. ನಂದಿಹಿಲ್ಸ್ ನಲ್ಲಿ ಹೊಸ ರೂಲ್ಸ್ ಜಾರಿಯಿಂದ ಪ್ರವಾಸಿಗರಿಗೆ ಕಿರಿಕಿರಿ ಉಂಟಾಯ್ತು. ನಂದಿ ಬೆಟ್ಟದಲ್ಲಿ 300 ಕಾರ್ ಗಳು ಮಾತ್ರ ಬೆಟ್ಟದ ಮೇಲೆ ಪಾರ್ಕ್ ಮಾಡಲು ಅವಕಾಶ ಇದ್ದು, ಹೀಗಾಗಿ ಮೇಲೆ ತೆರಳಿದ ವಾಹನಗಳು ವಾಪಸ್ ಆಗೋವರೆಗೂ ಬೇರೆ ವಾಹನಗಳನ್ನು ಅಲ್ಲಿ ಬಿಡುವುದಿಲ್ಲ. ಈ ಹೊಸ ಪಾರ್ಕಿಂಗ್ ವ್ಯವಸ್ಥೆ ಯಿಂದ ನಂದಿಬೆಟ್ಟಕ್ಕೆ ಬರಲು ಆಗದೇ ಪ್ರಯಾಣಿಕರು ಪರದಾಟ ನಡೆಸಿದರು. ವಿಕೇಂಡ್ ನಲ್ಲಿ ನಂದಿಹಿಲ್ಸ್ ನೋಡಲು ಬಂದ್ರೆ ಪ್ರವಾಸಿಗರಿಗೆ ಸಮಸ್ಯೆ ತಪ್ಪಿದ್ದಲ್ಲ.