IPL

ಸ್ಲೋ ಬ್ಯಾಟಿಂಗ್ ಮಾಡಿ ಸಿಕ್ಕಾಪಟ್ಟೆ ಟ್ರೋಲ್ ಆದ CSK..!

Oct 9, 2020, 5:28 PM IST

ಬೆಂಗಳೂರು(ಅ.09): ಕೋಲ್ಕತ ನೈಟ್‌ ರೈಡರ್ಡ್ ತಂಡದ ವಿರುದ್ಧ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್‌ ಕಿಂಗ್ಸ್ ಅಚ್ಚರಿಯ ಸೋಲು ಕಂಡಿತ್ತು. ಕೆಕೆಆರ್ ವಿರುದ್ಧ ಮಂದಗತಿಯಲ್ಲಿ ಬ್ಯಾಟಿಂಗ್ ಮಾಡಿ ಸಿಎಸ್‌ಕೆ ತಂಡ ಸಿಕ್ಕಾಪಟ್ಟೆ ಟ್ರೋಲ್‌ಗೆ ಗುರಿಯಾಗಿದೆ. 

ಇಷ್ಟು ದಿನ ಗೆದ್ದರೂ-ಸೋತರೂ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ರೋಲ್ ಆಗುತಿತ್ತು. ಆದರೆ ಇದೀಗ ಟ್ರೋಲ್ ಆಗುವ ಸರದಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ್ದಾಗಿದೆ.

ಡೆಲ್ಲಿಗೆ ಶಾರ್ಜಾದಲ್ಲಿ ಟಕ್ಕರ್ ಕೊಡುತ್ತಾ ರಾಜಸ್ಥಾನ ರಾಯಲ್ಸ್..?

ಅದರಲ್ಲೂ ಕೇದಾರ್ ಜಾಧವ್ ಬ್ಯಾಟಿಂಗ್ ನೋಡಿದ ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾರಂಭಿಸಿದ್ದಾರೆ. ದಯವಿಟ್ಟು ಮುಂದಿನ ಪಂದ್ಯಕ್ಕೆ ಆಡಲು ಬರಬೇಡಿ ಎಂದು ನೆಟ್ಟಿಗರು ಸಿಎಸ್‌ಕೆ ಬ್ಯಾಟ್ಸ್‌ಮನ್ ಜಾಧವ್ ಅವರನ್ನು ಟ್ರೋಲ್ ಮಾಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.