IPL

ವಾಷಿಂಗ್ಟನ್ ಸುಂದರ್ RCB ತಂಡದ ಅನ್‌ಸಂಗ್ ಹೀರೋ..!

Oct 14, 2020, 5:44 PM IST

ಬೆಂಗಳೂರು(ಅ.14): 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅದ್ಭುತ ಪ್ರದರ್ಶನ ತೋರುತ್ತಿದೆ. ಟೂರ್ನಿಯ ಮೊದಲ 7 ಪಂದ್ಯಗಳ ಪೈಕಿ 5ರಲ್ಲಿ ಗೆಲುವು 2 ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಯುಜುವೇಂದ್ರ ಚಹಲ್, ಎಬಿ ಡಿವಿಲಿಯರ್ಸ್, ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಮಧ್ಯದಲ್ಲಿ ಮತ್ತೊಬ್ಬ ಆಟಗಾರ ಗಮನಾರ್ಹ ಪ್ರದರ್ಶನ ತೋರುತ್ತಿದ್ದರೂ, ಹೈಲೈಟ್ ಆಗುತ್ತಿಲ್ಲ. ಅದ್ಭತ ಪ್ರದರ್ಶನ ತೋರುತ್ತಿದ್ದರೂ ಆತನ ಆಟಕ್ಕೆ ತಕ್ಕಂತಹ ಬೆಲೆ ಸಿಗುತ್ತಿಲ್ಲ.

ಐಪಿಎಲ್ 2020: ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್‌ಗೆ ಶಾಕ್ ನೀಡುತ್ತಾ ರಾಜಸ್ಥಾನ ರಾಯಲ್ಸ್?

ಹೌದು, ಆಡಿದ ಏಳು ಪಂದ್ಯಗಳಲ್ಲಿ ಆಫ್‌ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಮಿಂಚಿದ್ರೂ ಸುದ್ದಿಯಾಗಿದ್ದು ತೀರಾ ಕಡಿಮೆ. ಆತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಿಜವಾದ ಅನ್‌ ಸಂಗ್ ಹೀರೋ. ಅಷ್ಟಕ್ಕೂ ಯಾರಾತ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.