IPL

ಬಲಿಷ್ಠ ಮಂಬೈಗೆ ಟಕ್ಕರ್ ನೀಡಿ ಪ್ಲೇ ಆಫ್‌ಗೇರುತ್ತಾ ಆರ್‌ಸಿಬಿ..?

Oct 28, 2020, 6:16 PM IST

ಅಬುಧಾಬಿ(ಅ.28): 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ ರೋಚಕತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದುವರೆಗೂ ಟೂರ್ನಿಯಲ್ಲಿ 47 ಪಂದ್ಯಗಳು ಜರುಗಿದ್ದರೂ ಯಾವ ತಂಡವೂ ತನ್ನ ಪ್ಲೇ ಆಫ್ ಸ್ಥಾನವನ್ನು ಖಚಿತಪಡಿಸಿಕೊಂಡಿಲ್ಲ.

ಹೌದು, ಇದೀಗ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲಿರುವ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಅಬುಧಾಬಿಯ ಶೇಕ್ ಜಾಯೆದ್ ಮೈದಾನದಲ್ಲಿ ಮುಖಾಮುಖಿಯಾಗುತ್ತಿದ್ದು, ಗೆದ್ದ ತಂಡ ಅಧಿಕೃತವಾಗಿ ಪ್ಲೇ ಅಫ್‌ ಪ್ರವೇಶಿಸಲಿದೆ.

IPL 2020: RCB ವಿರುದ್ಧದ ಪಂದ್ಯಕ್ಕೂ ಮುನ್ನ ಮುಂಬೈ ಇಂಡಿಯನ್ಸ್‌ಗೆ ಬಿಗ್ ಶಾಕ್..!

ಇನ್ನು ಇವತ್ತಿನ(ಅ.28) ಪಂದ್ಯಕ್ಕೆ ರೋಹಿತ್ ಶರ್ಮಾ ಅನುಪಸ್ಥಿತಿ ಮುಂಬೈ ಇಂಡಿಯನ್ಸ್ ತಂಡವನ್ನು ಕಾಡುವ ಸಾಧ್ಯತೆಯಿದೆ. ಇಂದಿನ ಪಂದ್ಯದ ಸಂಭಾವ್ಯ ತಂಡ ಹೇಗಿರಲಿದೆ? ಈ ಪಂದ್ಯ ಹೇಗಿರಲಿದೆ ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.