IPL

IPL 2020: KKR ತಂಡಕ್ಕೆ ಶಾಕ್ ಕೊಡುತ್ತಾರಾ RCB ಹುಡುಗರು..?

Oct 12, 2020, 5:58 PM IST

ಶಾರ್ಜಾ(ಅ.12): ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆರ್‌ಸಿಬಿ ಭರ್ಜರಿ ಗೆಲುವು ದಾಖಲಿಸಿದ ಗುಂಗಿನಿಂದ ಅಭಿಮಾನಿಗಳು ಇನ್ನೂ ಹೊರ ಬಂದಿಲ್ಲ. ಹೀಗಿರುವಾಗಲೇ ಇಂದು ವಿರಾಟ್ ಕೊಹ್ಲಿ ಪಡೆ ಬಲಿಷ್ಠ ಕೆಕೆಆರ್ ತಂಡವನ್ನು ಎದುರಿಸಲು ಸಜ್ಜಾಗಿದೆ.

ಹೌದು, ಶಾರ್ಜಾ ಮೈದಾನದಲ್ಲಿಂದು ದಿನೇಶ್ ಕಾರ್ತಿಕ್ ನೇತೃತ್ವದ ಕೋಲ್ಕತ ನೈಟ್‌ ರೈಡರ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರಿಸಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಶಾರ್ಜಾ ಮೈದಾನ ಆತಿಥ್ಯವನ್ನು ವಹಿಸಿದೆ.

ಅನುಷ್ಕಾ ಶರ್ಮ ನಂತರ ಈ ಕ್ರಿಕೆಟರ್‌ ಪತ್ನಿ ಪ್ರೆಗ್ನೆಂಟಾ?

ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಡಿದ ರೀತಿ ನೋಡಿ ಕೆಕೆಆರ್ ದಂಗಾಗಿ ಹೋಗಿದೆ. ಇಂದು(ಅ.12) ಶಾರ್ಜಾದಲ್ಲಿ ಕೆಕೆಆರ್ ತಂಡವನ್ನು ಮಣಿಸಿ ಆರ್‌ಸಿಬಿ ಮೂರನೇ ಸ್ಥಾನಕ್ಕೆ ಲಗ್ಗೆಯಿಡುತ್ತಾ ಎನ್ನುವುದನ್ನು ಕಾದು ನೋಡಬೇಕಾಗಿದೆ.