ಆಗಸ್ಟ್‌ ಅಂತ್ಯಕ್ಕೆ 3ನೇ ಅಲೆ, ನಿತ್ಯ 1 ಲಕ್ಷ ಕೇಸು; ತಜ್ಞರ ಎಚ್ಚರಿಕೆ

Jul 18, 2021, 10:43 AM IST

ಬೆಂಗಳೂರು (ಜು. 18): ಆಗಸ್ಟ್‌ ಅಂತ್ಯದ ವೇಳೆಗೆ ದೇಶದಲ್ಲಿ ಕೊರೋನಾ 3ನೇ ಅಲೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಈಗಾಗಲೇ ತಜ್ಞರು ಎಚ್ಚರಿಸಿದ್ದಾರೆ. ಇದೇ ಮಾತನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್‌)ನ ಹಿರಿಯ ವಿಜ್ಞಾನಿ ಪ್ರೊ.ಸಮೀರನ್‌ ಪಾಂಡ್ಯ ಪುನರುಚ್ಚರಿಸಿದ್ಧಾರೆ.  ಈ ವೇಳೆ ನಿತ್ಯ 1 ಲಕ್ಷ ಹೊಸ ಸೋಂಕಿತರು ಪತ್ತೆಯಾಗುವ ಸಾಧ್ಯತೆ ಇದೆ ಎಂದಿದ್ದಾರೆ. 

'ಒಂದು ವೇಳೆ ಕೊರೋನಾ ಮತ್ತೆ ಹೊಸ ಹೊಸ ರೂಪಾಂತರಿಯಾಗಿ ಹೊರಹೊಮ್ಮದೇ ಇದ್ದಲ್ಲಿ, 3ನೇ ಅಲೆಯ ವೇಳೆ ಸೋಂಕಿತರ ಪ್ರಮಾಣವು ಮೊದಲ ಅಲೆಯಲ್ಲಿ ಕಾಣಿಸಿಕೊಂಡ ಪ್ರಮಾಣದಲ್ಲೇ ಇರಲಿದೆ. ಆದರೆ ಅದು ಒಂದು ವೇಳೆ ಮತ್ತಷ್ಟುಪ್ರಮಾಣದಲ್ಲಿ ರೂಪಾಂತರಗೊಂಡು, ಹರಡುವಿಕೆ ಪ್ರಮಾಣ ತೀವ್ರವಾದರೆ, ಪರಿಸ್ಥಿತಿ ಗಂಭೀರವಾಗಲಿದೆ’ ಎಂದು ಎಚ್ಚರಿಸಿದ್ದಾರೆ.