ಸ್ಟಾಲಿನ್, ದಳಪತಿ, ಸಿಂಗಂ ಮತ್ತು ತಮಿಳು ರಾಜನೀತಿ! ದ್ರಾವಿಡ ನೆಲದಲ್ಲಿ ಅಣ್ಣಾಮಲೈ ಭೀಷಣ ಶಪಥ!

Dec 28, 2024, 7:10 PM IST

ತಮಿಳುನಾಡಿನಲ್ಲಿ ಚುನಾವಣಾ ಯುದ್ಧ ಶುರುವಾದ ಹಾಗಿದೆ. ಆ ಯುದ್ಧಕ್ಕೆ ದಳಪತಿ ವಿಜಯ್ ಎಂಟ್ರಿಯಾಗಿದೆ. ಇವರ ಎಂಟ್ರಿಯಿಂದ ಬಿಜೆಪಿಗೆ ಲಾಭ ಅನ್ನೋ ಲೆಕ್ಕಾಚಾರ ಅಲ್ಲಿ ನಡೀತಿದೆ. ತಮಿಳುನಾಡಿನ ರಾಜಕೀಯ ಮತ್ತಷ್ಟು ರಂಗೇರಿದೆ. ಅದಕ್ಕೆ ಕಾರಣ ನಟ ವಿಜಯ್ ಅವರ ರಾಜಕೀಯ ಎಂಟ್ರಿ. ಇವರು ರಾಜಕೀಯಕ್ಕೆ ಬಂದಿರೋದ್ರಿಂದ ಅಲ್ಲಿರುವ ಪಕ್ಷಗಳ ಪೈಕಿ ಯಾರಿಗೆ ಲಾಭ? ಯಾರಿಗೆ ನಷ್ಟ ಅನ್ನೋ ಲೆಕ್ಕಾಚಾರಗಳು ಆರಂಭವಾಗಿವೆ. ವಿಜಯ್ ಎಂಟ್ರಿಯಿಂದ ಬಿಜೆಪಿಗೆ ಲಾಭವಾಗುತ್ತಾ? ಒಂದು ವೇಳೆ ಆಗೋದೇ ಆದ್ರೆ ಅದು ಹೇಗೆ?

ತಮಿಳುನಾಡಿನಂತಹ ಬರಡು ಭೂಮಿಯಲ್ಲಿ ಕಮಲ ಅರಳಿಸೋ ಜವಾಬ್ದಾರಿಯನ್ನ ಬಿಜೆಪಿ ಅಣ್ಣಾಮಲೈಗೆ ಕೊಟ್ಟಿದೆ. ಹಾಗಿದ್ರೆ ಅಣ್ಣಾಮಲೈ ಮೇಲೆ ಬಿಜೆಪಿ ಅಷ್ಟೊಂದು ನಂಬಿಕೆ ಇಡ್ಕೊಂಡಿರೋದು ಯಾಕೆ? ಡಿಎಂಕೆ ಸರ್ಕಾರದ ವಿರುದ್ಧ ಸಮರ ಸಾರಿದ್ದಾರೆ ಅಣ್ಣಾಮಲೈ. ಡಿಎಂಕೆಯನ್ನ ಅಧಿಕಾರದಿಂದ ಕಿತ್ತೊಗೆಯೋವರೆಗೂ ಚಪ್ಪಲಿ ಹಾಕಲ್ಲ.ಶೂ ಧರಿಸಲ್ಲ ಅಂತ ಶಪಥ ಮಾಡಿದ್ದಾರೆ. ಡಿಎಂಕೆಯನ್ನ ಸೋಲಿಸಬೇಕು ಅಂದ್ರೆ ಬಿಜೆಪಿ ಬಲಿಷ್ಠವಾಗಲೇಬೇಕು. ಆ ಸವಾಲು ಅಣ್ಣಾಮಲೈ ಮುಂದಿದೆ. ಅದು ಸಾಧ್ಯವಾಗುತ್ತೆ ಅನ್ನೋ ನಂಬಿಕೆಯಲ್ಲಿಯೇ ಬಿಜೆಪಿ ಅಣ್ಣಾಮಲೈಗೆ ಆ ಜವಾಬ್ದಾರಿ ಕೊಟ್ಟಿರೋದು.