Dec 3, 2019, 6:55 PM IST
ಬೆಂಗಳೂರು (ಡಿ.03): ಕ್ರಿಶ್ಚಿಯನ್ ಸನ್ಯಾಸಿನಿಯೊಬ್ಬರು ಕೇರಳದ ಚರ್ಚ್ ಗಳಲ್ಲಿ ನಡೆಯುತ್ತಿರುವ ಲೈಂಗಿಕ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಕಿರಿಯ ವಯಸ್ಸಿನ ಸನ್ಯಾಸಿನಿಯರ ಮೇಲೆ ಚರ್ಚ್ ಪಾದ್ರಿಗಳು ಹೇಗೆ ದೌರ್ಜನ್ಯವೆಸಗುತ್ತಾರೆ ಎಂಬುವುದನ್ನು ಇವರು ತಮ್ಮ ಆತ್ಮ ಚರಿತ್ರೆಯಲ್ಲಿ ವಿವರಿಸಿದ್ದಾರೆ.
ರೋಮನ್ ಕ್ಯಾಥೋಲಿಕ್ ಚರ್ಚ್ ವ್ಯಾಪ್ತಿಗೊಳಪಡುವ ಫ್ರಾನ್ಸಿಸ್ಕನ್ ಕ್ಲಾರಿಸ್ಟ್ ಸಂಸ್ಥೆ ಮೂಲಕ ಸೇವೆ ಸಲ್ಲಿಸುತ್ತಿರುವ ಸಿಸ್ಟರ್ ಲೂಸಿ ಕಲಪ್ಪುರಂ ತಮ್ಮ ಆತ್ಮ ಚರಿತ್ರೆಯಲ್ಲಿ ಈ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.