ಸವಾರನಿಲ್ಲದೇ ವೇಗವಾಗಿ ಚಲಿಸಿತು ರಾಯಲ್ ಎನ್‌ಫೀಲ್ಡ್, ದೃಶ್ಯ ನೋಡಿ ಬೆಚ್ಚಿ ಬಿದ್ರು ಜನ..!

Aug 15, 2021, 5:19 PM IST

ಬೆಂಗಳೂರು (ಆ. 15): ಸವಾರನಿಲ್ಲದೇ ವಾಹನಗಳು ಚಲಿಸುವುದನ್ನು ಸಿನಿಮಾಗಳಲ್ಲಿ ನೋಡಿದ್ದೇವೆ. ಆದರೆ ಇದು ಸಿನಿಮಾಗಳಿಗೆ ಮಾತ್ರ ಸೀಮಿತವಾಗಿಲ್ಲ. ಅಂತದ್ದೇ ಸಿನಿಮೀಯ ದೃಶ್ಯವನ್ನು ಕಣ್ಣಾರೆ ನೋಡಿ ಜನ ಒಂದು ಕ್ಷಣ ಬೆಚ್ಚಿ ಬಿದ್ದಿದ್ದರು. ಅಸಲಿಗೆ ಈ ಘಟನೆ ನಡೆದಿರುವುದು ಪುಣೆಯ ನಾಸಿಕ್‌ ಹೆದ್ದಾರಿಯಲ್ಲಿ. ಆ. 09 ರಂದು ಸಂಜೆ 6. 30 ರ ಸುಮಾರಿಗೆ ಸವಾರನಿಲ್ಲದ ರಾಯಲ್‌ ಎನ್‌ಫೀಲ್ಟ್ ರಸ್ತೆಯಲ್ಲಿ ಚಲಿಸಿದೆ. ಇದನ್ನು ನೋಡಿ ಜನ ಅವಾಕ್ಕಾಗಿದ್ದರು. ಎದುರಿಗೆ ಬರುತ್ತಿದ್ದ ವಾಹನ ಸವಾರನಿಗೆ ಜನ ಕೂಗಿ ಎಚ್ಚರಿಕೆ ನೀಡಿದ್ದರು. ಇನ್ನೇನೂ ಗುದ್ದೇ ಬಿಟ್ಟಿತು ಎನ್ನುವಾಗ ಬೈಕ್ ತನ್ನ ಪಥ ಬದಲಾಯಿಸಿದೆ. ಈ ವಿಡಿಯೋ ವೈರಲ್ ಆಗಿದೆ.