ಜೈ ಶ್ರೀರಾಮ್: ರಾಮಭಕ್ತರ ಕನಸು ಕೊನೆಗೂ ನನಸು

Aug 5, 2020, 12:33 PM IST

ಬೆಂಗಳೂರು(ಆ.05): ಅಯೋಧ್ಯೆಯಲ್ಲಿ ರಾಮ ಮಂದಿರ ಭೂಮಿ ಪೂಜೆಗೆ ಕ್ಷಣಗಣನೆ ಆರಂಭವಾಗಿದೆ. ಶತಮಾನಗಳ ಹೋರಾಟಕ್ಕೆ ಇಂದು ತಾರ್ಖಿಕ ಅಂತ್ಯ ಸಿಕ್ಕಂತಾಗಿದ್ದು ಭವ್ಯ ರಾಮ ಮಂದಿರಕ್ಕೆ ಪ್ರಧಾನಿ ಮೋದಿ ಭೂಮಿ ಪೂಜೆಯ ಮೂಲಕ ಶಿಲಾನ್ಯಾಸ ನೆರವೇರಿಸಲಿದ್ದಾರೆ. 

ಅಶೋಕ್ ಸಿಂಘಾಲ್ ನೇತೃತ್ವದ ವಿಶ್ವ ಹಿಂದೂ ಪರಿಷತ್ ಅವಿರತ ಶ್ರಮ ವಹಿಸುವ ಮೂಲಕ ಮಂದಿರದ ಕನಸನ್ನು ಜೀವಂತವಾಗಿರಿಸಿಟ್ಟಿತು. ಲಾಲ್‌ ಕೃಷ್ಣ ಅಡ್ವಾಣಿಯವರು ರಥಯಾತ್ರೆ ಮಾಡಲು ಸಿಂಘಾಲ್ ಹೋರಾಟ ಪ್ರೇರಣೆ ನೀಡಿತ್ತು.

ರೇಷ್ಮೆ ಧೋತಿ, ಕುರ್ತಾ ಧರಿಸಿ ರಾಮಜನ್ಮ ಭೂಮಿ ಅಯೋಧ್ಯೆಯತ್ತ ಮೋದಿ!
ನೂರಾರು ವರ್ಷಗಳ ಹೋರಾಟದ ಫಲವಾಗಿ ಇಂದು ರಾಮ ಭಕ್ತರ ಕನಸು ನನಸಾಗುತ್ತಿದೆ. ದೇಶದ ಅತಿ ದೊಡ್ಡ ಸಂಭ್ರಮಕ್ಕೆ ಇಂದು ಅಯೋಧ್ಯ ಸಾಕ್ಷಿಯಾಗುತ್ತಿದೆ.