Feb 23, 2024, 5:29 PM IST
ಸಿನಿಮಾ ಮತ್ತು ರಾಜಕೀಯ. ಈ ಎರಡೂ ಕೂಡ ಬೇರೆ ಬೇರೆ ಕ್ಷೇತ್ರಗಳು. ಆದ್ರೆ, ಭಾರತದ(India) ಪಾಲಿಗೆ ಈ ಮಾತನ್ನ ನಂಬೋದು ಕಷ್ಟ. ಯಾಕಂದ್ರೆ, ಸಿನಿಮಾ ನಟರು ರಾಜಕೀಯಕ್ಕೆ ಎಂಟ್ರಿ ಕೊಟ್ಟಿರೋದನ್ನೂ ನೋಡಿದೀವಿ. ರಾಜಕಾರಣಿಗಳು ಸಿನಿಮಾದಲ್ಲಿ ನಟಿಸಿರೋದನ್ನೂ ನೋಡಿದ್ದೀವಿ. ಈ ಮಾತುಗಳನ್ನ ಈಗ್ಯಾಕೆ ಹೇಳ್ಬೇಕಾಯ್ತು ಅಂದ್ರೆ, ಅದಕ್ಕೆ ಕಾರಣವಾಗಿದ್ದು, ರಾಹುಲ್ ಗಾಂಧಿ(Rahul Gandhi) ಅವರ ಈ ಹೇಳಿಕೆ. ಎರಡು ಅವಧಿಯ ಆಡಳಿತದ ಬಳಿಕವೂ ಪ್ರಧಾನಿ ಮೋದಿ(Narendra Modi) ಅವರು ಸೃಷ್ಟಿಸಿರೋ ಹವಾ ಕಡಿಮೆಯಾದ ಹಾಗೇನೂ ಕಾಣ್ತಾ ಇಲ್ಲ. ಹಾಗಾಗಿನೇ ಕೇಸರಿ ಪಾಳಯ ತನ್ನ ಟಾರ್ಗೆಟ್‌ನ 400 ಅಂತ ಫಿಕ್ಸ್ ಮಾಡ್ಕೊಂಡಿದೆ. ಮೋದಿ ನಾಗಾಲೋಟಕ್ಕೆ ಬಿಗ್ ಬ್ರೇಕ್ ಹಾಕ್ಬೇಕು ಅಂತ ಹುಟ್ಕೊಂಡಿದ್ದ, ಮಹಾಘಟಬಂಧನ್ ನೋಡ್ ನೋಡ್ತಿದ್ದ ಹಾಗೇ ಚೂರುಚೂರಾಗ್ತಾ ಇದೆ.. ಅದರಲ್ಲೂ ಒಂದು ವಿಚಿತ್ರ ಸಂಗತಿ ಏನು ಅಂದ್ರೆ, ರಾಹುಲ್ ಗಾಂಧಿ ಅವರು ನಡೆಸ್ತಾ ಇರೋ ಜೋಡೋ ಯಾತ್ರೆ, ಎಲ್ಲೆಲ್ಲಿ ಕಾಲಿಡುತ್ತೋ, ಅಲ್ಲಲ್ಲೇ, ಮೈತ್ರಿ ಚೂರುಚೂರಾಗ್ತಾ ಇರೋದು ವಿಚಿತ್ರ. ರಾಹುಲ್ ಗಾಂಧಿ ಅವರು ಪದೇ ಪದೇ, ತಮ್ಮ ಭಾಷಣದಲ್ಲಿ ಬಚ್ಚನ್ ಕುಟುಂಬವನ್ನ ಎಳೆದು ತರ್ತಿದ್ದಾರೆ. ಅದಕ್ಕೆ ಕಾರಣ ಏನು ಅನ್ನೋದಂತೂ ನಿಗೂಢ ರಹಸ್ಯ. ಅಯೋಧ್ಯೆಲಿ ಅಮಿತಾಭ್(Amitabh Bachchan) ಇದ್ರು, ಐಶ್ವರ್ಯ ರೈ(Aishwarya Rai) ಇದ್ರು. ಆದ್ರೆ ಒಬಿಸಿ ಅವರೇ ಇರ್ಲಿಲ್ಲ ಅಂತ ಹೇಳಿಕೆ ನೀಡಿದ್ರು ರಾಹುಲ್ ಗಾಂಧಿ.
ಇದನ್ನೂ ವೀಕ್ಷಿಸಿ: Congress Govt Controversies: ಬಿಜೆಪಿ ಕೌಂಟರ್‌ಗೆ .."ಅಸಲಿ ಸತ್ಯ" ತಿಳಿಸಿದ ಮುಜರಾಯಿ ಮಂತ್ರಿ..!