ವಯನಾಡ್‌ನಲ್ಲಿ ಮೋದಿ ವೈಮಾನಿಕ ಸಮೀಕ್ಷೆ, ಸಂತ್ರಸ್ತರಿಗೆ ಧೈರ್ಯ ತುಂಬಿದ ಪ್ರಧಾನಿ!

Aug 10, 2024, 11:06 PM IST

ಬೆಂಗಳೂರು (ಆ.10): ವಯನಾಡ್‌ನಲ್ಲಿ ರಕ್ಷಣಾ ಕಾರ್ಯಾಚರಣೆಗಳು ಮುಕ್ತಾಯವಾದ ಬೆನ್ನಲ್ಲಿಯೇ ಭೂಕುಸಿತ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ವೈಮಾನಿಕ ಸಮೀಕ್ಷೆ ನಡೆಸಿದರು. ಈ ವೇಳೆ ಸಂತ್ರಸ್ತರನ್ನು ಭೇಟಿ ಮಾಡು ಮಾತುಕತೆ ನಡೆಸಿದರು.

ರಕ್ಷಣಾ ಕಾರ್ಯಾಚರಣೆಗಳು ನಡೆದ ರೀತಿ, ಮುಂದಾಗಬೇಕಾದ ಕೆಲಸಗಳ ಬಗ್ಗೆ ಮೋದಿ ವಿವರಗಳನ್ನೂ ಪಡೆದುಕೊಂಡರು. ಈ ವೇಳೆ ಕೇರಳ ಸಿಎಂ ಪಿಣರಾಯಿ ವಿಜಯನ್‌, ಗವರ್ನರ್‌ ಮೊಹಮದ್‌ ಆರಿಫ್‌ ಖಾನ್‌ ಪ್ರಧಾನಿ ಜೊತೆಯಲ್ಲಿದ್ದರು.

ದುರಂತದಲ್ಲಿ ಮಡಿದ ಮಕ್ಕಳೆಷ್ಟು? ವಯನಾಡು ಸಂತ್ರಸ್ಥರ ಭೇಟಿಯಾಗಿ ಭಾವುಕರಾದ ಮೋದಿ!

ಈ ದುರಂತದಲ್ಲಿ ಬದುಕುಳಿದವರ ಜೊತೆ ನಾವಿದ್ದೇವೆ. ಕೇಂದ್ರ ಸರ್ಕಾರ ಇಲ್ಲಿಗೆ ಸಚಿವರ  ತಂಡವನ್ನು ಕಳುಹಿಸಿದೆ. ಮುಖ್ಯಮಂತ್ರಿ, ಅಧಿಕಾರಿಗಳು ಭೇಟಿ ಮಾಡಿದ್ದಾರೆ. ಈ ಘಟನೆ ಬಗ್ಗೆ ಸಿಎಂ ವಿವರವಾಗಿ ಪತ್ರ ಕಳುಹಿಸುವುದಾಗಿ ಹೇಳಿದ್ದಾರೆ. ನಾನು ಬದುಕುಳಿದವರಿಗೆ ಭರವಸೆ ನೀಡಲು ಬಯಸುತ್ತೇನೆ. ಈ ದುಃಖದ ಸಮಯದಲ್ಲಿ  ಕೇಂದ್ರ ಮತ್ತು ರಾಜ್ಯ ಸರ್ಕಾರ, ದೇಶದ ಜನರು ಸೇರಿ  ಎಲ್ಲರೂ ನಿಮ್ಮೊಂದಿಗೆ ಇರುತ್ತಾರೆ ಎಂದು ಹೇಳಿದರು.