ನಾರಾಯಣನ ಸೇವಕರು: BAPS ಕಾರ್ಯಕರ್ತರ ಸೇವೆ ಶ್ಲಾಘಿಸಿದ ಪ್ರಧಾನಿ ಮೋದಿ

Dec 9, 2024, 4:25 PM IST

BAPS ಕಾರ್ಯಕರ್ತರ ಸೇವೆ  ಪ್ರಧಾನಿ ಮೋದಿ ಶ್ಲಾಘಿಸಿದ್ದು ದಶಕಗಳಿಂದಲೂ BAPS ಕಾರ್ಯಕರ್ತರು ಸಮಾಜದಲ್ಲಿ ಬಿಕ್ಕಟ್ಟಿನ ಪರಿಸ್ಥಿತಿ ಎದುರಾದಾಗ ನೆರವಿಗೆ ಧಾವಿಸಿದ್ದಾರೆ, ನಿಸ್ವಾರ್ಥ ಭಾವದಿಂದ ಸೇವೆಗೈದಿದ್ದಾರೆ. ಅದು ಪ್ರಾಕೃತಿಕ ವಿಕೋಪವೇ ಆಗಿರಲಿ, ಮತ್ಯಾವುದೇ ದುರ್ಘಟನೆ ಸಂಭವಿಸಲಿ, BAPS ಕಾರ್ಯಕರ್ತರು ಮುಂಚೂಣಿಯಲ್ಲಿ ನಿಂತು ಜನರಿಗೆ ಸಹಾಯಹಸ್ತ ಚಾಚಿದ್ದಾರೆ. 2001ರ ಭುಜ್​​ ಭೂಕಂಪ,  ಕೋವಿಡ್​​ ಸಾಂಕ್ರಾಮಿಕ ಸೇರಿದಂತೆ ಹಲವು ಸಂಕಷ್ಟದ ಸಮಯದಲ್ಲಿ BAPS ಕಾರ್ಯಕರ್ತರು ಮಾನವೀಯ ನೆರವು ಒದಗಿಸಿದ್ದಾರೆ. ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅದ್ರಲ್ಲೂ 2022ರಲ್ಲಿ ಯುಕ್ರೇನ್​ ಮೇಲೆ ರಷ್ಯಾ ದಾಳಿ ಮಾಡಿದಾಗ ಭಾರತೀಯ ವಿದ್ಯಾರ್ಥಿಗಳು ತೊಂದರೆಗೆ ಸಿಲುಕಿದ್ದರು. ಯುದ್ಧಪೀಡಿತ ರಾಷ್ಟ್ರದಿಂದ ಭಾರತೀಯರನ್ನ ರಕ್ಷಿಸಲು ಪ್ರಧಾನಿ ಮೋದಿ BAPS ಸ್ವಾಮಿ ನಾರಾಯಣ ಸಂಸ್ಥೆಯ ಸಹಕಾರ ಕೋರಿದ್ದರು. ತಕ್ಷಣವೇ ಯುರೋಪ್​​ ರಾಷ್ಟ್ರಗಳಲ್ಲಿದ್ದ BAPS ಸ್ವಯಂ ಸೇವಕರು ಪೋಲೆಂಡ್​ ಗಡಿಗೆ ತಲುಪಿ ಭಾರತೀಯರ ರಕ್ಷಣೆಗೆ ಟೊಂಕ ಕಟ್ಟಿ ನಿಂತರು. ಅಲ್ಲೇ ಟೆಂಟ್​​ಗಳನ್ನ ಹಾಕಿ ಊಟ, ವಸತಿ ವ್ಯವಸ್ಥೆ ಕಲ್ಪಿಸಿದ್ರು. ಭಾರತೀಯರು ಮಾತ್ರವಲ್ಲದೇ ವಿದೇಶಗಳ ವಿದ್ಯಾರ್ಥಿಗಳಿಗೂ BAPS ಕಾರ್ಯಕರ್ತರು ಸಹಾಯ ಮಾಡಿದ್ರು.ಸ್ವಯಂ ಸೇವಕರ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನುದ್ದೇಶಿಸಿ ಪ್ರಧಾನಿ ಮೋದಿ ವರ್ಚುವಲ್​ ಆಗಿ ಮಾತನಾಡಿದ್ರು. ಈ ವೇಳೆ BAPS ಸ್ವಯಂ ಸೇವಕರ ಸಮಾಜಮುಖಿ ಕಾರ್ಯಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ರು.