Feb 8, 2021, 2:11 PM IST
ಬೆಂಗಳೂರು (ಫೆ. 08): ರಾಜ್ಯಸಭೆಯಲ್ಲಿಂದು ಪ್ರಧಾನಿ ನರೇಂದ್ರ ಮೋದಿ ಸುದೀರ್ಘವಾಗಿ ಮಾತನಾಡಿದ್ದಾರೆ. ಕೃಷಿಕಾಯ್ದೆ ಬಗ್ಗೆ ರೈತರ ಹೋರಾಟ, ಸಾಲಮನ್ನಾ ವಿಚಾರವಾಗಿ ಮಾತನಾಡಿದ್ದಾರೆ. ಕೃಷಿಕಾಯ್ದೆಯನ್ನು ಸಮೃದ್ಧಗೊಳಿಸಲು ಇದು ಸೂಕ್ತವಾದ ಸಮಯ. ಈ ಕಾಲ ಹೋದರೆ ಮತ್ತೆ ಸಿಗುವುದಿಲ್ಲ. MSP ಇತ್ತು, ಇದೆ ಮುಂದೆಯೂ ಕೂಡಾ ಇರುತ್ತದೆ. ಕೃಷಿಕಾಯ್ದೆಯನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಲು ಸಾಧ್ಯವಿಲ್ಲ. ಕಾಯ್ದೆ ತಿದ್ದುಪಡಿಗೆ , ಮಾತುಕತೆಗೆ ಸರ್ಕಾರ ಸಿದ್ಧವಿದೆ' ಎಂದು ಸ್ಪಷ್ಟಪಡಿಸಿದ್ದಾರೆ.
ಪಂಜಾಬ್ನ ರೊಟ್ಟಿ ತಿನ್ನುವ ಸೌಭಾಗ್ಯ ನನಗೆ ಸಿಕ್ಕಿದೆ: ಸಿಖ್ಖರ ಮನವೊಲಿಕೆಗೆ ಮೋದಿ ಯತ್ನ!
ಈ ದೇಶಕ್ಕೆ ಸಿಖ್ಖರ ಕೊಡುಗೆ ಬಗ್ಗೆ ನಮಗೆ ಗೌರವವಿದೆ. ವಿದೇಶಿ ಶಕ್ತಿಗಳು ಸಿಖ್ಖರ ತಲೆಯಲ್ಲಿ ಏನೇನೋ ತುಂಬುತ್ತಿವೆ. ಅದಕ್ಕೆ ಜಾಗ ಕೊಡಬಾರದು ಎಂದಿದ್ದಾರೆ. ಇನ್ನು ಸಾಲಮನ್ನಾ ವಿಚಾರವಾಗಿ, ಸಾಲಮನ್ನಾದಿಂದ ಏನೂ ಉಪಯೋಗವಿಲ್ಲ' ಎಂದು ಹೇಳಿದ್ದಾರೆ. ಮೋದಿ ಮಾತಿನ ವಿಮರ್ಶೆ ಹೀಗಿದೆ.