Oct 29, 2021, 3:09 PM IST
ಬೆಂಗಳೂರು (ಅ. 29): ಈಗಾಗಲೇ ಪೆಟ್ರೋಲ್ (Petrol), ಡೀಸೆಲ್, ಅಡುಗೆ ಅನಿಲ ದರ (LPG) ಏರಿಕೆ ಭಾರೀ ಬಿಸಿ ಅನುಭವಿಸುತ್ತಿರುವ ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ಮುಂದಿನ ವಾರ ಮತ್ತೊಂದು ಭರ್ಜರಿ ಶಾಕ್ ನೀಡುವ ಸಾಧ್ಯತೆ ಇದೆ. ಸೆ.1 ರಂದು ಪರಿಷ್ಕರಣೆಯಾಗಲಿರುವ ಎಲ್‌ಪಿಜಿ ದರದ ವೇಳೆ ಭಾರೀ ಪ್ರಮಾಣದಲ್ಲಿ ದರ ಹೆಚ್ಚಳದ ಸಾಧ್ಯತೆ ಇದೆ.
LPG ಒಂದೇ ಬಾರಿ 100 ರೂ. ಏರಿಕೆ: ಗ್ರಾಹಕ ಕಂಗಾಲು!
ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಧನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಮುಟ್ಟಿದ್ದು, ಸೌದಿಯಲ್ಲಿ ಎಲ್‌ಪಿಜಿ ಬೆಲೆ ಶೇ.60ರಷ್ಟುಏರಿಕೆಯಾಗಿದ್ದು, 1 ಟನ್ ಎಲ್‌ಪಿಜಿ ಬೆಲೆ 60 ಸಾವಿರ ದಾಟಿದೆ. ಇನ್ನು 1 ಬ್ಯಾರಲ್ ಬ್ರೆಂಟ್ ಕಚ್ಚಾ ತೈಲದ ಬೆಲೆ 6400 ರುಪಾಯಿ ದಾಟಿದೆ. ಇನ್ನು ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರ ಶುಕ್ರವಾರ ಕ್ರಮವಾಗಿ 36 ಪೈಸೆ ಮತ್ತು 33 ಪೈಸೆಯಷ್ಟುಏರಿಕೆಯಾಗಿದೆ. ಇನ್ನು ಬೆಂಗಳೂರಿನಲ್ಲಿ ಪೆಟ್ರೋಲ್ ದರ 112.06 ರು. ಮತ್ತು ಡೀಸೆಲ್ ಬೆಲೆ 102.98 ರು.ಗೆ ಜಿಗಿತ ಕಂಡಿದೆ. ಅದೇ ರೀತಿ ದೆಹಲಿಯಲ್ಲಿ 108.29 ರು. ಮತ್ತು ಡೀಸೆಲ್ ಬೆಲೆ 97.02 ರು.ಗೆ ಏರಿದೆ.