Nov 24, 2023, 11:41 AM IST
ನ್ಯೂಯಾರ್ಕ್/ದೆಹಲಿ: ಹರ್ದೀಪ್ ಸಿಂಗ್ ನಿಜ್ಜರ್ ಕೊಲೆ ಹಿಂದೆ, ಇಂಡಿಯಾದ ಏಜೆಂಟರ ಕೈವಾಡ ಇದೆ ಅಂತ, ಆ ಟ್ರುಡೊ ಅದ್ಯಾವ ಘಳಿಗೇಲಿ ಹೇಳಿದ್ನೋ ಏನೋ.. ಅದೀಗ ಹೊಸ ಸಂಚಲನವನ್ನೇ ಸೃಷ್ಟಿಸಿದೆ.. ಈಗ ಅಮೆರಿಕಾ ಕೂಡ ಆ ಮಾತಿಗೆ ತಕ್ಕ ಹಾಗೆ ವರ್ತನೆ ಮಾಡ್ತಾ ಇರೋದು, ನೂರೆಂಟು ಅನುಮಾನಗಳಿಗೆ ಕಾರಣವಾಗಿದೆ. ತನ್ನ ನೆಲದಲ್ಲಿ ಕೆನಡಾದ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಯ ಸಂಚನ್ನು ವಿಫಲಗೊಳಿಸಿರುವುದಾಗಿ ಅಮೆರಿಕ ಹೇಳಿಕೊಂಡಿದೆ. ಈ ಸಂಚಿನಲ್ಲಿ ಭಾರತೀಯರ ಕೈವಾಡ ಇದೆ ಎಂದು ಗೊತ್ತಾಗಿ ಭಾರತ ಸರ್ಕಾರಕ್ಕೆ ಹತ್ಯೆಯ ಹುನ್ನಾರದ ಬಗ್ಗೆ ಬೈಡೆನ್ ಸರ್ಕಾರ ಎಚ್ಚರಿಕೆ ನೀಡಿತ್ತು. ಈ ಮೂಲಕ ಆತನ ಹತ್ಯೆ ಸಂಚನ್ನು ಅಮೆರಿಕ ವಿಫಲಗೊಳಿಸಿತು ಎಂದು ಅಮೆರಿಕ ಪತ್ರಿಕೆ ‘ಫೈನಾನ್ಷಿಯಲ್ ಟೈಮ್ಸ್’ ವರದಿ ಮಾಡಿತ್ತು. ಅಮೆರಿಕಾ ವರದಿ ನೋಡಿ ಭಾರತ ಕೊಟ್ಟ ಪ್ರತ್ಯುತ್ತರ ಏನು. ಕೊಲೆ ಮಾಡೋಕೆ ಸಂಚು ರೂಪಿಸಿದ್ದು ಯಾರು..? ಯಾರ ಕೊಲೆಗೆ ಸಿದ್ಧವಾಗಿತ್ತಂತೆ ಆ ಸ್ಕೆಚ್? ಒಬ್ಬ ಉಗ್ರನಿಗೆ ಎರಡು ದೇಶಗಳ ಪೌರತ್ವ! ಹೇಗದು? ಅಮೆರಿಕಾಗೆ ಆ ಉಗ್ರ ಹಾಕಿದ ಸವಾಲು ಏನು ಗೊತ್ತಾ? ಅದೆಲ್ಲದರ ಹಿಂದಿರೋ ಕಂಪ್ಲೀಟ್ ಸ್ಟೋರಿ, ಇಲ್ಲಿದೆ ನೋಡಿ..