Jun 29, 2022, 4:39 PM IST
ಭೀಕರ ಮಳೆಗೆ ಅಸ್ಸಾಂ ತತ್ತರಿಸಿದೆ. ಕಳೆದೊಂದು ತಿಂಗಳಿನಿಂದ ಸುರಿಯುತ್ತಿರುವ ಮಳೆಗೆ ಈಶಾನ್ಯ ರಾಜ್ಯ ಸಂಪೂರ್ಣ ತತ್ತರಿಸಿದೆ. ನೋಡು ನೋಡುತ್ತಿದ್ದಂತೆ ದೊಡ್ಡ ಮನೆಯೊಂದು ಕುಸಿದು ಬಿದ್ದಿದೆ. ಪ್ರವಾಹದ ನೀರು ಸರಾಗವಾಗಿ ಹರಿದ ಪರಿಣಾಮ ಎರಡಂತಸ್ತಿನ ಮನೆ ನೆಲಕ್ಕೆ ಕುಸಿದಿದೆ. ಇದರ ಜೊತೆ ಟರ್ಕಿಯಲ್ಲಿ ಇದೇ ರೀತಿಯ ಪ್ರವಾಹಕ್ಕೆ ದೊಡ್ಡದಾದ ಸೇತುವೆಯೊಂದು ಕೊಚ್ಚಿ ಹೋಗಿದೆ. ಇವಿಷ್ಟೇ ಅಲ್ಲದೇ ಆಕಾಸದಲ್ಲಿ ಹಾರುತ್ತಿದ್ದ ವಿಮಾನವೊಂದು ಇದ್ದಕ್ಕಿದಂತೆ ರಸ್ತೆಯಲ್ಲಿ ಚಲಾಯಿಸುತ್ತಿದ್ದ ಕಾರಿನ ಮೇಲೆ ಬೀಳುತ್ತಿದೆ. ನೆಲಕ್ಕೆ ಅಪ್ಪಳಿಸುತ್ತಿದ್ದಂತೆ ವಿಮಾನ ಬೆಂಕಿಯುಂಡೆಯಾಗಿದೆ. ಇವೆಲ್ಲಾ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ